ಪುತ್ತೂರು: ನಾಡಿನೆಲ್ಲೆಡೆ ತ್ಯಾಗ ಬಲಿದಾನದ ಸಂಕೇತವಾದ ಈದ್ ಹಬ್ಬವು ವಿಜೃಂಭಣೆಯಿಂದ ನಡೆದಿದ್ದು, ಕೊರೋನಾ ಕಾರಣ ಸರಕಾರದ ಮುನ್ನೆಚ್ಚರಿಕೆಯನ್ನು ಪಾಲಿಸಿಕೊಂಡು ಮಸೀದಿಗಳಲ್ಲಿ ಪ್ರಾರ್ಥನೆ ಜರುಗಿತು. ಇದರ ಮಧ್ಯೆ ಸಾಮಾಜಿಕವಾಗಿ ಯಶಸ್ವಿ ಕಾರ್ಯಚಟುವಟಿಕೆಗಳನ್ನು ಮಾಡುತ್ತಿರುವ ಸೆಕ್ಯೂಲರ್ ಯೂತ್ ಫಾರಂ ಪುತ್ತೂರು ತಂಡದ ವತಿಯಿಂದ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಮಾರು 150 ರೋಗಿಗಳಿಗೆ ಉಚಿತ ಊಟ ವಿತರಿಸುವ ಮೂಲಕ ಸಂಘಟನೆಯ ಸದಸ್ಯರು ತಮ್ಮ ಈ ಭಾರಿಯ ಈದ್ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾದ ಇಕ್ಬಾಲ್ ಪೆರಿಗೇರಿ, ಪುತ್ತೂರು ಎಮ್ ವೈಸಿ ವೈಧ್ಯಕೀಯ ಸಮಿತಿ ಅಧ್ಯಕ್ಷರಾದ ನಝೀರ್ ಬಲ್ನಾಡ್, ಸೆಕ್ಯೂಲರ್ ಯೂತ್ ಫಾರಂ ಪುತ್ತೂರು ಸಂಘಟನೆಯ ಪದಾಧಿಕಾರಿಗಳಾದ ಮೋನು ಬಪ್ಪಳಿಗೆ, ರಶೀದ್ ಮುರ, ಆಲಿ ಪರ್ಲಡ್ಕ, ಬಶೀರ್ ಪರ್ಲಡ್ಕ, ಹಂಝತ್ ಸಾಲ್ಮರ, ವಿಕೆ ಶರೀಫ್ ಬಪ್ಪಳಿಗೆ, ಸನದ್ ಯೂಸುಫ್, ಇಂತಿಯಾಝ್ ಬಪ್ಪಳಿಗೆ, ಜಲೀಲ್ ಬಲ್ನಾಡ್, ಆಸಿಫ್ ಗೋಳಿಕಟ್ಟೆ, ಸಫ್ವಾನ್ ಕೂರತ್, ಶಮೀರ್ ಬೆದ್ರಾಳ, ತವೀದ್, ಇರ್ಶಾದ್ ಸಾಲ್ಮರ, ಬಿಎಚ್ ರಝಾಕ್ ಸಾಲ್ಮರ, ಅಶ್ರಫ್ ಸವಣೂರು ಉಪಸ್ಥಿತರಿದ್ದರು.