ಪುತ್ತೂರು : ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳನ್ನು ದೇಶ ದ್ರೋಹದ ಕೆಲಸವೆಂದು ಕೋಟೆಚಾ ಹಾಲ್ ನಲ್ಲಿ ನಡೆದ ಬಿ.ಜೆ.ಪಿ ಗ್ರಾಮಾಂತರ ಮಂಡಲದ ವಿಶೇಷ ಕಾರ್ಯಕಾರಿಣಿ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳನ್ನು ದೇಶ ದ್ರೋಹದ ಕೆಲಸವೆಂದು ಕೋಟೆಚಾ ಹಾಲ್ ನಲ್ಲಿ ನಡೆದ ಬಿ.ಜೆ.ಪಿ ಗ್ರಾಮಾಂತರ ಮಂಡಲದ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಣಯ ಕೈಗೊಂಡು ಕಾಂಗ್ರೆಸ್ ಪಕ್ಷಕ್ಕೆ ಮತ್ತು ಅದರ ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ಅವಮಾನ ಹಾಗೂ ಮಾನಹಾನಿ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಬಿ ವಿಶ್ವನಾಥ ರೈ ಯವರು, ಬಿಜೆಪಿ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ ಯವರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ದಿನಾಂಕ 20/07/2021 ರಂದು ಪುತ್ತೂರು ಸಾಲ್ಮರದ ಕೋಟೆಚಾ ಹಾಲ್ ನಲ್ಲಿ ನಡೆದ ಬಿಜೆಪಿ ಗ್ರಾಮಾಂತರ ಮಂಡಲದ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಬಿಜೆಪಿ ಗ್ರಾಮಾಂತರ ಮಂಡಲದ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆಯವರು ಕಾಂಗ್ರೆಸ್ ಪಕ್ಷದ ವಿರುದ್ಧ ಖಂಡನಾ ನಿರ್ಣಯ ಕೈಗೊಳ್ಳಲಿದ್ದೇವೆ ಎಂದು ತಿಳಿಸಿ ಈ ವಿಷಯವನ್ನು ಕಾರ್ಯಕಾರಿಣಿಯಲ್ಲಿ ಮಂಡಿಸಿರುತ್ತಾರೆ. ಈ ವಿಚಾರವು 21/07/2021 ರಂದು ಪತ್ರಿಕೆಗಳಲ್ಲಿ ಪ್ರಕಟಗೊಂಡುರುತ್ತದೆ. ಈ ಹೇಳಿಕೆ ಮತ್ತು ನಿರ್ಣಯವು ಸ್ಪಷ್ಟವಾಗಿ ಕಾಂಗ್ರೆಸ್ ಪಕ್ಷ ಮತ್ತು ಅದರ ಕಾರ್ಯಕರ್ತರಿಗೆ ಮಾನಹಾನಿ ಹಾಗೂ ಅವಮಾನ ಉಂಟು ಮಾಡುವಂತದ್ದಾಗಿದೆ.
ಈ ಹೇಳಿಕೆ ಮತ್ತು ಪತ್ರಿಕೆಯಲ್ಲಿ ಪ್ರಕಟಗೊಂಡು ಪ್ರಸಾರವಾದ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಮೆ ಮತ್ತು ಗರಿಮೆಗೆ ದಕ್ಕೆಯಾಗಿರುತ್ತದೆ. ಪಕ್ಷ ದುಡಿಯುವ ಮತ್ತು ಗುರುತಿಸಿಕೊಂಡಿರುವ ಅಸಂಖ್ಯಾತ ಜನರ ಭಾವನೆಗಳಿಗೆ ಧಕ್ಕೆಯಾಗಿದ್ದು ಮಾನಹಾನಿಯುಂಟಾಗಿರುತ್ತದೆ. ಈ ಕೃತ್ಯದಲ್ಲಿ ನಿರ್ಣಯವನ್ನು ಮಂಡಿಸಿದ ಪುರುಷೋತ್ತಮ ಮುಂಗ್ಲಿಮನೆ ಮಾತ್ರವಲ್ಲದೇ ಸದ್ರಿ ಈ ನಿರ್ಣಯಕ್ಕೆ ಸಹಿ ಹಾಕಿದ ಮತ್ತು ಬೆಂಬಲಿಸಿದ ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ಕಾರ್ಯಕಾರಿಣಿಯ ಸದಸ್ಯರು ಸಹ ಅಪರಾಧಿಗಳಾಗಿರುತ್ತಾರೆ ಈ ಕುರಿತು ತನಿಖೆ ನಡೆಸಿ ಆರೋಪಿ ಪುರುಷೋತ್ತಮ ಮುಂಗ್ಲಿಮನೆ ಮತ್ತು ಇತರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡುವಂತೆ ದೂರುನಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ, ಶಕೂರ್ ಹಾಜಿ, ಅಮಲ ರಾಮಚಂದ್ರ, ಶರಣ್ ಸಿಕ್ವೇರಾ, ಸಹರಾ ಭಾನು, ಸಿಂಬ್ರಾನ್ ಖಾನ್ ಉಪಸ್ಥಿತರಿದ್ದರು.