ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಮೊದಲ ಪದಕ ಬಂದಿದೆ. ಒಲಂಪಿಕ್ಸ್ನಲ್ಲಿ ಮಹಿಳಾ ವೇಯ್ಟ್ ಲಿಫ್ಟಿಂಗ್ನಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದಾರೆ. 49 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಭಾರತಕ್ಕೆ ಗೌರವ ತಂದಿದ್ದಾರೆ. ಜಪಾನ್‌ನ ಟೋಕಿಯೋದಲ್ಲಿ ಒಲಂಪಿಕ್ಸ್ ನಡೆಯುತ್ತಿದೆ.
ಮಹಿಳಾ ವೇಯ್ಟ್ ಲಿಫ್ಟಿಂಗ್ನ ಕೊನೆಯ ಸುತ್ತಿನಲ್ಲಿ ಭಾರತದ ಮೀರಾಬಾಯಿ ಚಾನು 202 ಕೆ.ಜಿ ತೂಕ ಎತ್ತಿ ಆಟ ಮುಗಿಸಿದರೆ ಚೀನಾದ ಹೊಯಿ ಝುಯಿಹುಯಿ 210 ಕೆಜಿ ತೂಕ ಲಿಫ್ಟ್ ಮಾಡುವ ಮೂಲಕ ಹೊಸ ಒಲಂಪಿಕ್ ದಾಖಲೆ ಬರೆದಿದ್ದಾರೆ. ಅಲ್ಲದೇ ಚಿನ್ನದ ಪದಕ ಪಡೆದುಕೊಂಡಿದ್ದಾರೆ.