ಪುತ್ತೂರು : ವಿದ್ಯುತ್ ವ್ಯವಸ್ಥೆಯೇ ಇಲ್ಲದ ಮನೆಗೆ ಉದ್ಯಮಿ ಹಾಗೂ ಪದ್ಮಶ್ರೀ ಸೋಲಾರ್ ಮಾಲಕ ಸೀತಾರಾಮ ರೈ ಕೆದಂಬಾಡಿಗುತ್ತು ಸೋಲಾರ್ ವಿದ್ಯುತ್ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟರು.
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಅವರು ವಿದ್ಯಾರ್ಥಿಗಳ ಮನೆಭೇಟಿ ಮಾಡುವ ಸಂದರ್ಭದಲ್ಲಿ ಪುತ್ತೂರು ನಗರದ ಕರ್ಮಲದ ಒಂದು ಮನೆಯಲ್ಲಿ ಬೆಳಕೇ ಇಲ್ಲದ ಪರಿಸ್ಥಿತಿಯನ್ನು ಮನಗಂಡು ಸೀತಾರಾಮ ಅವರಲ್ಲಿ ವಿಚಾರವನ್ನು ತಿಳಿಸಿದರು. ಇದಕ್ಕೆ ತಕ್ಷಣ ಸ್ಪಂದಿಸಿದ ಇವರು ಸೋಲಾರ್ ವಿದ್ಯುತ್ ಸಂಪರ್ಕ ಕಲ್ಪಿಸುವ ಭರವಸೆಯನ್ನು ನೀಡಿ ನುಡಿದಂತೆ ನಡೆದು ಇದೀಗ ಆರು ಮಕ್ಕಳ ಸಹಿತ ವಾಸವಾಗಿರುವ ಇಲ್ಲಿನ ಮನೆಗೆ ಬೆಳಕಿನ ವ್ಯವಸ್ಥೆ ಮಾಡಲಾಗಿದೆ.
ಸೋಲಾರ್ ಸಂಪರ್ಕ ವ್ಯವಸ್ಥೆಯನ್ನು ವಿತರಿಸುವ ಸಂದರ್ಭದಲ್ಲಿ ನಗರ ಸಭಾ ಸದಸ್ಯ ಪಿ ಜಿ ಜಗನ್ನಿವಾಸ ರಾವ್, ಶಿವರಾಮ ಸಫಲ್ಯ, ವಸಂತ ಕಾರೆಕ್ಕಾಡು,ಸಮೀರ್ ಪರ್ಲಡ್ಕ, ಸರ್ಕಾರಿ ಪ್ರೌಢಶಾಲೆ ಕೊಂಬೆಟ್ಟಿನ ಉಪಪ್ರಾಂಶುಪಾಲ ವಸಂತ, ಪದ್ಮಶ್ರೀ ಸೋಲಾರ್ ಸಿಬ್ಬಂದಿಗಳು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.