ಬೆಳ್ತಂಗಡಿ ತಾಲೂಕಿನಲ್ಲಿ ಹತ್ತು ಹಲವು ಸೇವೆಗಳನ್ನು ಮಾಡುವ ಮೂಲಕ ಗುರುತಿಸಿಕೊಂಡಿರುವ, ಸೇವೆ ಸಾಮರಸ್ಯ ಸಂಘಟನೆ ಧ್ಯೇಯ ವಾಕ್ಯದೊಡನೆ ಬೆಸ್ಟ್ ಫೌಂಡೇಷನ್ ಬೆಳ್ತಂಗಡಿ ಸಂಸ್ಥೆ ನೀಡುತ್ತಿದೆ ಅತ್ಯುತ್ತಮ ಅವಕಾಶ.
75ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಂಗವಾಗಿ ವಿನೂತನ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಜಯಶಾಲಿಗಳಿಗೆ ಸಿಗಲಿದೆ ಬಂಪರ್ ಬಹುಮಾನ.
ಭರವಸೆಯ ನಾಯಕ, ನಿಸ್ವಾರ್ಥ ಸಮಾಜ ಸೇವಕ ರಕ್ಷಿತ್ ಶಿವರಾಂ ನೇತೃತ್ವದಲ್ಲಿ ನಡೆಯುತ್ತಿರುವ ಸ್ಪರ್ಧೆಯು ಫೇಸ್ಬುಕ್ ಆನ್ ಲೈನ್ ಸ್ಪರ್ಧೆಯಾಗಿದ್ದು ಸ್ಪರ್ಧಾ ವಿವರ ಹೀಗಿದೆ;
ದೇಶಭಕ್ತಿಗೀತೆ ಸ್ಪರ್ಧೆ :
1)5ನೇ ತರಗತಿಯಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು.
2)ಹಾಡಲು 4 ನಿಮಿಷಗಳ ಕಾಲಾವಕಾಶವಿದೆ
3)ಕರೋಕೆ ಅಥವಾ ಸಂಗೀತ ಉಪಕರಣಗಳನ್ನು ಬಳಸುವ ಹಾಗಿಲ್ಲ.
4)ಯಾವುದೇ ಭಾಷೆಯ ದೇಶಭಕ್ತಿಗೀತೆಯನ್ನು ಹಾಡಬಹುದು.
5)ಒಬ್ಬ ಸ್ಪರ್ಧಿಗೆ ಒಂದು ಹಾಡನ್ನು ಹಾಡಲು ಅವಕಾಶ.
ಭಾಷಣ ಸ್ಪರ್ಧೆ :
1)ಯುವಜನತೆ ಎದುರಿಸುತ್ತಿದುವ ಉದ್ಯೋಗ ಸಮಸ್ಯೆ ಮತ್ತು ಪರಿಹಾರ ವಿಷಯದ ಮೇಲೆ ಭಾಷಣ
2)ಸಮಯದ ಮಿತಿ 4 ನಿಮಿಷ
3)ವಯಸ್ಸಿನ ಮಿತಿ ಇರಲಾರದು. ಕನ್ನಡ ಭಾಷೆಯಲ್ಲಿರಬೇಕು.
ಸ್ಪರ್ಧೆಯಲ್ಲಿ ಭಾಗವಹಿಸುವವರು ಮೊಬೈಲನ್ನು ಅಡ್ಡಲಾಗಿ ಹಿಡಿದು ವೀಡಿಯೋವನ್ನು ಮಾಡಿ. ಜತೆಗೆ ಯಾವುದೇ ಎಡಿಟಿಂಗ್ ಮಾಡಿದ ವೀಡಿಯೋಗೆ ಅವಕಾಶವಿಲ್ಲ. ತೀರ್ಪುಗಾರರ ತೀರ್ಮಾನ ಇಲ್ಲಿ ಅಂತಿಮವಾಗಿರುತ್ತದೆ. ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲಾ ಸ್ಪರ್ಧಾಳುಗಳಿಗೆ ಅವಕಾಶವಿದೆ.
ಅದೇ ರೀತಿ ವಿಜೇತರಾದ ಸ್ಪರ್ಧಿಗಳಿಗೆ 5000 ರೂ ಹಾಗೂ 3000 ರೂ ನಗದು ಬಹುಮಾನವಿದ್ದು, ಅತೀ ಹೆಚ್ಚು ಲೈಕ್ ಪಡೆಯುವ ಸ್ಪರ್ಧಿಗೂ ವಿಶೇಷ ಬಹುಮಾನ ನೀಡಲಾಗುತ್ತದೆ.
ಈಗಾಗಲೇ ಫೇಸ್ಬುಕ್ ನಲ್ಲಿ Rakshith Shivaram Tulunad ಎನ್ನುವ ಹೆಸರಿನಲ್ಲಿ ಪೇಜ್ ಇದ್ದು ಇದನ್ನು ಹೆಚ್ಚು ಜನ ಫೋಲೋ ಮಾಡಿ, ಈ ಮೂಲಕ ಸ್ಪರ್ಧಾ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.
ಸ್ಪರ್ಧಾ ವೀಡಿಯೋವನ್ನು ಆಗಸ್ಟ್ 11 ರೊಳಗೆ 7204978230 ವಾಟ್ಸಾಪ್ ಸಂಖ್ಯೆಗೆ ಕಳುಹಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅದೇ ರೀತಿ ಲೈಕ್ ಮೂಲಕ ಹೋಗುವವರಿಗೂ ಅವಕಾಶ ಮುಕ್ತವಾಗಿದ್ದು ಈ ಲೈಕ್ ಪಡೆಯಲು ಆಗಸ್ಟ್ 13 ಕೊನೆಯ ದಿನಾಂಕವಾಗಿದ್ದು ಆಗಸ್ಟ್ 15 ರಂದು ಅಂತಿಮ ಸ್ಪರ್ಧಾ ಫಲಿತಾಂಶ ಹೊರಬೀಳಲಿದೆ.
ಈ ಮುಕ್ತ ಅವಕಾಶವನ್ನು ಎಲ್ಲರೂ ಬಳಸಿಕೊಳ್ಳಿ…
ಫೇಸ್ಬುಕ್ ಲಿಂಕ್ ಇಲ್ಲಿದೆ.. ಫೋಲೋ ಮಾಡಲು ಇದನ್ನು ಕ್ಲಿಕ್ಕಿಸಿ
https://www.facebook.com/Rakshith-Shivaram-Tulunad-107087981640879/