ಉಡುಪಿ : ಫೇಸ್ ಬುಕ್ ನಲ್ಲಿ ಪರಿಚಯಗೊಂಡ ವ್ಯಕ್ತಿಗೆ ಮಹಿಳೆಯೊಬ್ಬರು ಫಾರ್ಮಸಿ ತೆರೆಯಲು 19 ಲ.ರೂ. ಖಾತೆಗೆ ವರ್ಗಾಯಿಸಿ ವಂಚನೆಗೊಳಗಾದ ಪ್ರಕರಣ ಉಡುಪಿ ನಗರ ಠಾಣೆಯಲ್ಲಿ ದಾಖಲಾಗಿದೆ.
ಲಿನೆಟ್ ಸಿಮಾ ರೊಡ್ರಿಗಸ್ (38) ಕುವೈಟ್ ದೇಶದಲ್ಲಿ ಉದ್ಯೋಗದಲ್ಲಿದ್ದು, ಫೇಸ್ ಬುಕ್ ಮೂಲಕ ಆರೋಪಿ ಡಾ| ಆ್ಯಂಡ್ರಿವ್ ಫೆಲಿಕ್ಸ್ ಎಂಬುವವರ ಪರಿಚಯವಾಗಿದೆ.
ಆರೋಪಿಯು ವೃತ್ತಿಯಲ್ಲಿ ವೈದ್ಯ ಎಂಬುದಾಗಿ ತಿಳಿಸಿದ್ದು ಜತೆಗೆ ದೆಹಲಿಯಲ್ಲಿ ಒಂದು ಫಾರ್ಮಸಿ ತೆರೆಯುವುದಾಗಿ ನಂಬಿಸಿ , ವಾಟ್ಸಪ್ ನಲ್ಲಿ ಸಂಪರ್ಕ ಹೊಂದಿ️, ಹಂತ ಹಂತವಾಗಿ 19 ಲ.ರೂ. ಮೊತ್ತವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡು ಮೋಸ ಹಾಗೂ ನಂಬಿಕೆ ದ್ರೋಹ ಎಸಗಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.