ಪುತ್ತೂರು : ಪುತ್ತೂರು ಸಿಐಡಿ ಪೊಲೀಸ್ ಅರಣ್ಯ ವಿಶೇಷ ಸಂಚಾರಿ ದಳದವರು ಕಾರ್ಯಾಚರಣೆ ಮಾಡಿ ಆ.೫ ರಂದು ಶಿವಮೊಗ್ಗದಲ್ಲಿ ಕೃಷ್ಣಮೃಗದ ಚರ್ಮ ಮಾರಾಟ ಜಾಲವನ್ನು ಪತ್ತೆ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.
ಪುತ್ತೂರು ಪೊಲೀಸ್ ಅರಣ್ಯ ಸಂಚಾರಿದಳದ ಎಸ್.ಐ ಜಾನಕಿ ಅವರ ನೇತೃತ್ವದಲ್ಲಿ ಖಚಿತ ಮಾಹಿತಿ ಮೇರೆಗೆ ಶಿವಮೊಗ್ಗದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಹಾವೇರಿ ನಿವಾಸಿಗಳಾದ ಖಲೀಲ್ (೩೩ವ) ಮತ್ತು ಮುಜಾಬಿನ್ (೨೫ವ) ರವರು ಬಂಧಿತ ಆರೋಪಿಗಳು.

ಘಟನೆ ವಿವರ
ಶಿವಮೊಗ್ಗದಲ್ಲಿ ಕೃಷ್ಣಮೃಗದ ಚರ್ಮ ಮಾರಾಟ ಮಾಡಲು ಹಾವೇರಿ ಬಸ್ ನಿಂದ ಬಂದ ಆರೋಪಿಗಳಾದ ಖಲೀಲ್ ಮತ್ತು ಮುಜಾಬಿನ್ ಅವರು ಶಿವವೊಗ್ಗದ ಮೆಗ್ಗನ್ ಆಸ್ಪತ್ರೆಯ ಬಳಿ ವ್ಯವಹಾರ ಕುದುರಿಸಲು ನಿಂತಿದ್ದ ವೇಳೆ ಪೊಲೀಸ್ ಅರಣ್ಯ ಸಂಚಾರಿದಳದ ಎಸ್ ಐ ಜಾನಕಿ, ಸಿಬ್ಬಂದಿಗಳಾದ ಉದಯ ಕುಮಾರ್ ಮತ್ತು ಸುಂದರ ಶೆಟ್ಟಿ ಅವರು ಆರೋಪಿಗಳನ್ನು ಬಂಧಿಸಿ ಅವರಿಂದ ಕೃಷ್ಣಮೃಗದ ಚರ್ಮವನ್ನು ವಶಕ್ಕೆ ಪಡೆದು ಕೊಂಡಿದ್ದಾರೆ. ಆರೋಪಿಗಳನ್ನು ಶಿವಮೊಗ್ಗ ಪೊಲೀಸ್ ಅರಣ್ಯ ಸಂಚಾರಿದಳಕ್ಕೆ ಒಪ್ಪಿಸಿದ್ದು. ಆರೋಪಿಗಳ ವಿರುದ್ದ ವನ್ಯ ಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಶಿವಮೊಗ್ಗದಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.