ಪುತ್ತೂರು: ಮರೀಲು-ಮದಕ ನಿವಾಸಿ ದಿ.ಲಿಗೋರಿ ಹಾಗೂ ಮೋನಿಕಾ ಡಿ’ಸೋಜರವರ ಪುತ್ರ ವಿನ್ಸೆಂಟ್ ಡಿ’ಸೋಜ(49)ರವರು ಹೃದಯಾಘಾತದಿಂದ ಕುವೈಟ್‌ನಲ್ಲಿ ಆ.2ರಂದು ನಿಧನ ಹೊಂದಿದ್ದಾರೆ.

ಮೃತ ವಿನ್ಸೆಂಟ್‌ರವರು ಹಲವಾರು ವರ್ಷ ಪುತ್ತೂರಿನಲ್ಲಿ ನೆಲೆಸಿದ್ದು, ಕಳೆದ ಎಂಟು ವರ್ಷಗಳಿಂದ ಮಂಗಳೂರಿನ ತೊಕ್ಕೊಟ್ಟು ಕೊಲ್ಯದಲ್ಲಿ ವಾಸವಾಗಿದ್ದರು. ಅಲ್ಲದೆ ಸಿಝ್ಲರ್ ಪುತ್ತೂರು ಇದರ ಸಕ್ರಿಯ ಸದಸ್ಯರಾಗಿಯೂ ಅವರು ಗುರುತಿಸಿಕೊಂಡಿದ್ದರು.
ಮೃತ ವಿನ್ಸೆಂಟ್‌ರವರು ಪತ್ನಿ ಸುನೀತಾ, ಪುತ್ರಿಯರಾದ ವಿಯಾನ್ನಾ ಹಾಗೂ ಸಿಯೋನಾ, ಸಹೋದರ ವಾಲ್ಟರ್, ಸಹೋದರಿಯರಾದ ಜಾನೆಟ್, ಲೀಡಿಯರವರನ್ನು ಅಗಲಿದ್ದಾರೆ. ಮೃತದೇಹವನ್ನು ಆ.9 ರಂದು ಸೋಮವಾರ ಬೆಳಿಗ್ಗೆ 9 ಗಂಟೆಗೆ ಮನೆಗೆ ತರಲಾಗುವುದು, 10.30 ಮನೆಯಿಂದ ಹೊರಟು 11 ಗಂಟೆಗೆ ಪೆರ್ಮನ್ನೂರು-ತೊಕ್ಕೊಟ್ಟು ಸಂತ ಸೆಬಾಸ್ಟಿಯನ್ ಚರ್ಚ್‌ನಲ್ಲಿ ಪೂಜೆ ನಡೆದು ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.