ಮಂಗಳೂರು: ಕರ್ನಾಟಕದಲ್ಲಿ ಪಾಸಿಟಿವಿಟಿ ಸಂಖ್ಯೆ ೦% ಆಗಿದ್ದ ಹಿನ್ನೆಲೆಯಲ್ಲಿ ಹಂತ ಹಂತವಾಗಿ ಲಾಕ್‌ಡೌನ್ ತೆರವು ಗೊಳಿಸಲಾಗಿತ್ತು. ಆದರೆ ಇದೀಗ ಅಪಾಯದ ಮಟ್ಟ ಮೀರುತ್ತಿರುವ ಹಿನ್ನೆಲೆ ಲಾಕ್‌ಡೌನ್ ಅನಿವಾರ್ಯವಾದಿತು” ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಪಾಸಿಟಿವಿಟಿ ಸಂಖ್ಯೆ ೦% ಆಗಿದ್ದ ಹಿನ್ನೆಲೆಯಲ್ಲಿ ಹಂತ ಹಂತವಾಗಿ ಲಾಕ್‌ಡೌನ್ ತೆರವು ಗೊಳಿಸಲಾಗಿತ್ತು. ಆದರೆ ಇದೀಗ ಅಪಾಯದ ಮಟ್ಟ ಮೀರುತ್ತಿರುವ ಹಿನ್ನೆಲೆ ಲಾಕ್ ಡೌನ್ ಅನಿವಾರ್ಯವಾದಿತು. ಹಾಗಾಗಿ ಈ ಬಗ್ಗೆ ಜನರು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಅಗತ್ಯತೆ ಇದೆ” ಎಂದಿದ್ದಾರೆ.
“ನಿತ್ಯ ಪಾಸಿಟಿವಿಟಿ ಸಂಖ್ಯೆ 2 ರಿಂದ 4 ಕ್ಕೆ ಏರಿಕೆ ಆಗುತ್ತಿದ್ದು, ಮುಂದಿನ ದಿನಗಳಲ್ಲಿ ಲಾಕ್ ಡೌನ್ ಅನಿವಾರ್ಯವಾದಿತು. ಹಾಗಾಗಿ ಈ ಬಗ್ಗೆ ಆರೋಗ್ಯ ಇಲಾಖೆ ಜನರು ಜಿಲ್ಲಾಡಳಿತ ನಿರ್ಧಾರ ಕೈಗೊಳ್ಳಲಿದೆ” ಎಂದು ತಿಳಿಸಿದ್ದಾರೆ.
ಕೊರೊನಾ ಸೊಂಕು ನಿಯಂತ್ರಣ ಹಿನ್ನೆಲೆ ಕೇರಳ ಗಡಿ ಭಾಗದಲ್ಲಿ ಪ್ರಯಾಣ ನಿರ್ಬಂಧ ವಿಚಾರದ ಕುರಿತು ಮಾತನಾಡಿದ ಅವರು, “ಎರಡು ಡೋಸ್ ವ್ಯಾಕ್ಸಿನ್ ಪಡೆದವರಿಗೆ ವಿದೇಶಗಳಿಗೆ ಪ್ರವಾಸ ಅನುಮತಿ ಇದೆ. ಆದರೆ ಪಕ್ಕದ ರಾಜ್ಯಗಳಿಗೆ ಹೋಗಲು ಅನುಮತಿ ಇಲ್ಲ. ಈ ಬಗ್ಗೆ ಆಯೋಗದೊಂದಗೆ ಚರ್ಚೆ ಮಾಡಲಾಗಿದೆ” ಎಂದರು.
ಇನ್ನು ಕೇರಳ ಭಾಗದಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದು ಜಿಲ್ಲೆಯಲ್ಲಿ ಸೋಂಕು ಹರಡದಂತೆ ಮುಂಜಾಗ್ರತೆ ವಹಿಸುವ ಅಗತ್ಯತೆ ಇದೆ. ಇಲ್ಲಿ ಕೇರಳ ಮಹಾರಾಷ್ಟ್ರ ಎಂಬುದು ಅಲ್ಲ ಜಿಲ್ಲೆಯ ಸೊಂಕು ನಿಯಂತ್ರಣ ಮುಖ್ಯವಾಗಿದೆ” ಎಂದು ತಿಳಿಸಿದ್ದಾರೆ.