ಪುತ್ತೂರು: ಬನ್ನೂರು ಚೆಲುವಮ್ಮನ ಕಟ್ಟೆ ಬಳಿ ಬೈಕ್ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿದ್ದು ಬೈಕ್ ಸವಾರ ಬನ್ನೂರು ಕರ್ಮಲ ನಿವಾಸಿ ತೀವ್ರ ಗಾಯಗೊಂಡ ಬಗ್ಗೆ ಆ.9ರಂದು ವರದಿಯಾಗಿದೆ.
ಕರ್ಮಲ ಕಡೆ ಹೋಗುತ್ತಿದ್ದ ಬೈಕ್ ಮತ್ತು ವಿರುದ್ಧ ದಿಕ್ಕಿನಿಂದ ಬಂದ ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿದ್ದು ಡಿಕ್ಕಿಯ ರಭಸಕ್ಕೆ ಕಾರು ರಸ್ತೆ ಬದಿಯ ದಿಣ್ಣೆಗೆ ಹತ್ತಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದೆ.




























