ಪುತ್ತೂರು : ಕೊರೋನಾ ನಿಯಮಿತವಾಗಿ ಏರಿಕೆಯಾಗುತ್ತಿದ್ದು ಇದೀಗ ಪುತ್ತೂರಿನ ನಗರಸಭೆಯ ನಾಲ್ವರು ಸಿಬ್ಬಂದಿಗಳಿಗೆ ಕೊರೋನಾ ಪಾಸಿಟಿವ್ ಬಂದಿರುವ ಬಗ್ಗೆ ಆ.9 ರಂದು ವರದಿಯಾಗಿದೆ.
ದಕ್ಷಿಣ ಕನ್ನಡದಲ್ಲಿ ದಿನೇ ದಿನೇ ಕೊರೊನಾ ತೀವ್ರಗತಿಯಲ್ಲಿ ಏರರಿಕೆಯಾಗುತ್ತಿದ್ದು, ಪುತ್ತೂರು ನಗರಸಭೆಯಲ್ಲೂ ಕೊರೋನಾ ಪ್ರಕರಣ ಪತ್ತೆಯಾಗಿದ್ದು, ಪುತ್ತೂರಿನ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಪಾಸಿಟಿವ್ ಬಂದವರು ಸದ್ಯ ಹೋಂ ಇಸೋಲೇಷನ್ ಗೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಗರಸಭಾ ಪೌರಾಯುಕ್ತ ಮಧು ಮನೋಹರ್, ನಗರಸಭಾ ವ್ಯಾಪ್ತಿಯ ಸಿಬ್ಬಂದಿಗಳಿಗೆ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಇಂದು ನಾವು ನಗರಸಭೆಯ ವ್ಯಾಪ್ತಿಯ ಎಲ್ಲಾ ಸಿಬ್ಬಂದಿಗಳು ಮತ್ತು ಅಧಿಕಾರಿಗಳಿಗೆ ಕೋವಿಡ್ ಪರೀಕ್ಷೆ ನಡೆಸಿದ್ದೇವೆ. ಅಷ್ಟೇ ಅಲ್ಲದೇ ನಗರ ಸಭೆ ಕಚೇರಿಗಳನ್ನೂ ಇಂದು ಸ್ಯಾನಿಟೈಸ್ ಮಾಡಲಾಗಿದೆ, ಯಾರೂ ಕೂಡಾ ಆತಂಕಗೊಳ್ಳಬೇಕಾಗಿಲ್ಲ, ನಗರಸಭೆಯ ಕಾರ್ಯಾ ಎಂದಿನಂತೆ ನಡೆಯುತ್ತದೆ ಎಂದು ಹೇಳಿದರು.
























