ಪುತ್ತೂರು : ಬೆಟ್ಟಂಪಾಡಿ ಗ್ರಾಮದ ತಲೆಪ್ಪಾಡಿ ನಿವಾಸಿಯಾಗಿದ್ದ ದಿ.ಅಬ್ದುಲ್ಲಾ ಹಾಜಿರವರ ಪುತ್ರ, ಸಾಲ್ಮರದ ಸಹನಾ ಟಿಂಬರ್ ಮಾಲಕ ಟಿ.ಎ.ರಹಿಮಾನ್(೬೩ವ.)ರವರು ಹೃದಯಾಘಾತದಿಂದ ಮಂಗಳೂರಿನಲ್ಲಿ ನಿಧನರಾಗಿದ್ದಾರೆ.

ಇವರು ಇರ್ದೆ ಪಳ್ಳಿತ್ತಡ್ಕ ಉರೂಸ್ ಸಮಿತಿಯ ಅಧ್ಯಕ್ಷರಾಗಿ, ಕೊರಿಂಗಿಲ ಜಮಾಅತ್ ಕಮಿಟಿಯ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಪುತ್ರರಾದ ನವಾಝ್, ಶಾಜವಾದ್, ಶಬೀಬ್, ಪುತ್ರಿ ಸಮ್ನಾಜ್ ರವರನ್ನು ಅಗಲಿದ್ದಾರೆ.




























