ಪುತ್ತೂರು: ಶ್ರೀರಾಮ ಗೆಳೆಯರ ಬಳಗದ ಆಶ್ರಯದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಶ್ರೀರಾಮ ಕ್ರೀಡಾಂಗಣದಲ್ಲಿ ನೆರವೇರಿಸಲಾಯಿತು.
ಧ್ವಜಾರೋಹಣವನ್ನು ನಿವೃತ್ತ ಸೇನಾಧಿಕಾರಿ ಪ್ರಸನ್ನ ಭಟ್ ನೆರವೇರಿಸಿ ಸ್ವಾತಂತ್ರ್ಯದ ಸಂದೇಶ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪುಷ್ಪ ವಹಿಸಿದ್ದರು. ಮುಖ್ಯ ಅತಿಥಿ ಗಳಾಗಿ ಪಂಚಾಯತ್ ಸದಸ್ಯರಾದ ಅಶೋಕ್ ಪುತ್ತಿಲ. ಬಾಲಕೃಷ್ಣ ಪೂಜಾರಿ. ಅರುಣಾ ಕಣ್ಣರ್ನೂಜಿ. ಮಾಜಿ ಸದಸ್ಯ ಮಹೇಶ್. ಬಾಲಚಂದ್ರ ಕಡ್ಯ. ವಿಪುಲ್ ಜೈನ್. ಅರುಣ್ ಪುತ್ತಿಲ. ಬಳಗದ ಅಧ್ಯಕ್ಷ ಹರೀಶ್ ಬಿಕೆ. ಅನಿಲ್ ಕಣ್ಣರ್ನೂಜಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತಾಡಿದ ಪ್ರಸನ್ನ ಭಟ್ ಸ್ವತಂತ್ರ್ಯಕ್ಕಾಗಿ ಹೋರಾಟ ಮಾಡಿದ, ಪ್ರಾಣ ತ್ಯಾಗ ಮಾಡಿದ ಲಕ್ಷಾಂತರ ಮಂದಿಗೆ ಗೌರವ ಸಲ್ಲಿಸಿ ನೆನಪಿಸುವ ಅವಶ್ಯಕತೆ ಇದೆ ಎಂದರು. ಇವತ್ತು ದೇಶದ ಒಳಗೆ ಇರುವ ದೇಶ ದ್ರೋಹಿ ಗಳು ಮತ್ತು ಹಿತ ಶತ್ರುಗಳನ್ನು ಎದುರಿಸಬೇಕಾಗಿದೆ. ಇವತ್ತು ಯುವಕರು ಈ ರಾಷ್ಟ್ರದ ಮುಂದೆ ಇರುವ ಸವಾಲುಗಳನ್ನು ಎದುರಿಸಿ ರಾಷ್ಟ್ರದ ಏಕತೆ, ಸಾರ್ವಭೌಮತೆ, ಅಖಂಡತೆಯನ್ನು ಎತ್ತಿ ಹಿಡಿಯಬೇಕಾಗಿದೆ ಮತ್ತು ಭಾರತವನ್ನು ವಿಶ್ವಗುರು ಮಾಡುವ ಸಂಕಲ್ಪ ಮಾಡಬೇಕಿದೆ ಎಂದರು.
ಅಧ್ಯಕ್ಷತೇ ವಹಿಸಿದ್ದ ಪುಷ್ಪ ಮಾತನಾಡಿ, ನಮ್ಮ ನಮ್ಮ ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಮತ್ತು ಸೇನೆಯಲ್ಲಿ ಸೇವೆ ಸಲ್ಲಿಸಿದ ಎಲ್ಲರನ್ನು ಈ ಅಮೃತ ವರ್ಷದ ಇಡೀ ವರ್ಷದಲ್ಲಿ ಗುರುತಿಸಿ ಗೌರವಿಸುವ ಕೆಲಸವನ್ನು ಮಾಡಬೇಕಿದೆ ಎಂದರು. ಇದುವೇ ನಾವು ಹೋರಾಟ ಮಾಡಿದವರಿಗೆ ಮತ್ತು ಸೇನೆಯಲ್ಲಿ ಕೆಲಸ ಮಾಡುವವರಿಗೆ ಕೊಡುವ ಗೌರವ ಎಂದರು.
ಅಶೋಕ್ ಪುತ್ತಿಲ ಸಾಂದರ್ಭಿಕವಾಗಿ ಮಾತಾಡಿದರು. ಧನಂಜಯ ಕಲ್ಲಮ ಸ್ವಾಗತಿಸಿ. ದಿನೇಶ್ ಕಲ್ಲಮ ಕಾರ್ಯಕ್ರಮ ನಿರ್ವಹಿಸಿ ಪ್ರಸಾದ್ ಬಿಕೆ ವಂದಿಸಿದರು.






























