ನವದೆಹಲಿ: ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಮಂಗಳವಾರ 25 ರೂ. ಏರಿಸಲಾಗಿದೆ. ಈ ಏರಿಕೆಯೊಂದಿಗೆ ದೇಶೀಯ ಸಿಲಿಂಡರ್ ಈಗ ರಾಷ್ಟ್ರ ರಾಜಧಾನಿಯಲ್ಲಿ 859 ರೂ.ಗೆ ತಲುಪಿದೆ.
ದೇಶಾದ್ಯಂತ ಇದೇ ಪ್ರಮಾಣದಲ್ಲಿ ಬೆಲೆಯನ್ನು ಹೆಚ್ಚಿಸಲಾಗಿದೆ. ತೈಲ ಕಂಪನಿಗಳು ದೇಶೀಯ ಅಡುಗೆ ಅನಿಲದ ಬೆಲೆಯನ್ನು ಸತತ ಎರಡನೇ ತಿಂಗಳು ಹೆಚ್ಚಿಸಿವೆ.
ದೇಶೀಯ ಸಿಲಿಂಡರ್ ಬೆಲೆ ಜೂನ್ 1 ರಂದು 809 ರೂ. ಇತ್ತು. ಇದನ್ನು ಜುಲೈ 1 ರಂದು 834 ರೂ.ಗೆ ಏರಿಸಲಾಗಿದೆ. ಜನವರಿ 1 ರಿಂದ ಆಗಸ್ಟ್ 17 ರ ನಡುವೆ ದೇಶೀಯ ಎಲ್ಪಿಜಿ ಸಿಲಿಂಡರ್ಗಳ ಬೆಲೆ ತಲಾ 165 ರೂ ಏರಿಕೆಯಾಗಿದೆ. ಮಂಗಳೂರಿನಲ್ಲಿ 860ರೂ. ಬೆಲೆ ದರ ನಿಗದಿಯಾಗಿದೆ.