ಪುತ್ತೂರು: ಸ್ವಾತಂತ್ರ್ಯ ದಿನಾಚರಣೆಯಂದು ಕಬಕದಲ್ಲಿ ರಥ ತಡೆದು, ಸಾವರ್ಕರ್ ರವರಿಗೆ ಅವಮಾನವಾಗುವ ರೀತಿಯಲ್ಲಿ ನಡೆದುಕೊಂಡಿದ್ದಾರೆ ಎಂಬ ಪ್ರಕರಣವೂ ಸಾಕಷ್ಟು ಸುದ್ದಿ ಮಾಡಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಆದರೇ ಬಂಧನವಾದ 48 ಗಂಟೆಗಳಲ್ಲಿಯೇ ಆರೋಪಿಗಳು ಜಾಮೀನು ಮೂಲಕ ಹೊರ ಬಂದಿದ್ದಾರೆ.
ಇತ್ತ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಸಂಘ ಪರಿವಾರಗಳು ಪ್ರತಿಭಟನೆ ನಡೆಸುತ್ತಿದ್ದರೇ ಅತ್ತ ಆರೋಪಿಗಳಿಗೆ ಜಾಮೀನು ದೊರಕಿದೆ. ಕೇಂದ್ರ, ರಾಜ್ಯ, ತಾಲೂಕು, ಜಿಲ್ಲೆ, ಗ್ರಾಮದಲ್ಲಿಯೂ ಬಿಜೆಪಿ ಸರಕಾರ ಇದ್ದರೂ ಸಹ ಆರೋಪಿಗಳಿಗೆ ಜಾಮೀನು ದೊರಕಿದ್ದು, ಈ ವಿಷಯವಾಗಿ ಸಚಿವರು ಮತ್ತು ಶಾಸಕರು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಟೀಕೆಗೆ ಗುರಿಯಾಗಿದ್ದಾರೆ.
ಎಸ್.ಡಿ.ಪಿ.ಐ ಕಾರ್ಯಕರ್ತರನ್ನು ಬಂಧಿಸಬೇಕು ಎಂದು ಸಂಘ ಪರಿವಾರಗಳು ಪ್ರತಿಭಟನೆ, ಪತ್ರಿಕಾಗೋಷ್ಠಿ, ಮನವಿಗಳನ್ನು ಸಲ್ಲಿಸುತ್ತಿದ್ದರು, ಆದರೇ ಎಸ್.ಡಿ.ಪಿ.ಐ ಕಾರ್ಯಕರ್ತರನ್ನು ಜಾಮೀನು ಮೂಲಕ ಬಿಡುಗಡೆಗೊಳಿಸಿರುವುದು ಹಲವರ ಕೆಂಗಣ್ಣಿಗೆ ಕಾರಣವಾಗಿದೆ.





‘ಸಾಯಲು, ಪ್ರತಿಭಟನೆ ಮಾಡಲು ಹಿಂದೂಗಳು ಬೇಕು, ಆದರೇ ಅದೇ ಹಿಂದುತ್ವಕ್ಕೆ ಧಕ್ಕೆ ಆದಾಗ ಬಿಜೆಪಿ ನಾಯಕರು ತಮ್ಮ ಲಾಭವನ್ನೇ ನೋಡೋದು ಬಿಟ್ಟರೇ, ಮಣ್ಣು ಬೇರೆನಿಲ್ಲ, ಅದಕ್ಕೆ ಉತ್ತಮ ನಿದರ್ಶನ ಮೊನ್ನೆಯ SDPI ವಿಷಯ, ಇವರ ಜಾಗದಲ್ಲಿ ಕಾಂಗ್ರೆಸ್ ಸರ್ಕಾರ ಇರುತ್ತಿದ್ದರೆ ಮೊನ್ನೆ ಹಿಂದುಗಳು ಸುಳ್ಳು ipc ಸೆಕ್ಷನ್ ಮೇಲೆ ಬಂಧಿಯಾಗಿ ಇನ್ನೂ 2-3 ವರ್ಷ ಜೈಲಲ್ಲಿ ಕೊಳೆಯಬೇಕಿತ್ತು’. ಎಂದೆಲ್ಲಾ ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದರ ಮೂಲಕ ಸಚಿವರು ಮತ್ತು ಶಾಸಕರ ವಿರುದ್ಧ ಟೀಕೆಗಳ ಸುರಿಮಳೆಗಳನ್ನು ಸುರಿಯುತ್ತಿದ್ದಾರೆ. ಸದ್ಯಕ್ಕೆ ಈ ವಿಷಯವೇ ಸಾಮಾಜಿಕ ಜಾಲತಾಣಗಳಲ್ಲಿ ಟ್ರೇಡಿಂಗ್ ನಲ್ಲಿದೆ..





























