ಪುತ್ತೂರು: ಪಡುವನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುತ್ಯಾಳ ಎಂಬಲ್ಲಿ ಕೆರೆಗೆ ಬಿದ್ದು ಮಯ್ಯಳ ಭಾಗದ ಟ್ಯಾಪಿಂಗ್ ವರ್ಕರ್ ಮೃತ ಪಟ್ಟ ಘಟನೆ ಆ.18 ರಂದು ನಡೆದಿದೆ.
ಮೃತರನ್ನು ಕಾಸರಗೋಡು ತಾಲೂಕು ದೇಲಂಪ್ಪಾಡಿ ಗ್ರಾಮದ ಮಯ್ಯಳ ನಿವಾಸಿ ರಮೇಶ್ ಪಾಟಾಳಿ ಮಯ್ಯಳ ಎಂದು ಗುರುತಿಸಲಾಗಿದೆ.
ಕೃಷ್ಣ ನಾಯ್ಕ್ ಎಂಬವರ ಮನೆಗೆ ಟ್ಯಾಪಿಂಗ್ ಕೆಲಸ ನೋಡಿಕೊಂಡು ಹೋಗಲು ಬಂದಿದ್ದ ರಮೇಶ್ ಪಾಟಾಳಿ ರಾತ್ರಿ ತಡವಾದ ಕಾರಣ ಅವರ ಮನೆಯಲ್ಲೇ ಉಳಿದುಕೊಂಡಿದ್ದರು. ರಮೇಶ್ ಪಾಟಾಳಿ ಬೆಳಗ್ಗಿನ ಜಾವ ಕೃಷ್ಣ ನಾಯ್ಕ್ ರವರ ಮನೆಯ ಬಾವಿಗೆ ಬಿದ್ದರೆನ್ನಲಾಗಿದೆ. ಆದರೇ ಈ ವಿಷಯ ಮನೆಯವರ ಗಮನಕ್ಕೆ ಬರಲಿಲ್ಲ, ಇಂದು ಮೃತದೇಹ ಬಾವಿಯಿಂದ ಮೇಲೆ ಬಂದ ಕಾರಣ ವಿಷಯ ಬೆಳಕಿಗೆ ಬಂದಿದೆ.
ಹಿಂದೂ ಜಾಗರಣ ವೇದಿಕೆಯ ಈಶ್ವರಮಂಗಲದ ಕಾರ್ಯಕರ್ತರು ಮೃತದೇಹವನ್ನು ಮೇಲೆತ್ತುವಲ್ಲಿ ಸಹಕರಿಸಿದರು. ಘಟನೆ ಕುರಿತು ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






























