ಕೋಸ್ಟಲ್ ವುಡ್ ಕಲಾವಿದರ ಮತ್ತು ತಂತ್ರಜ್ಞರ ಒಕ್ಕೂಟಇದರ 2020/21ರ ವಾರ್ಷಿಕ ಮಹಾಸಭೆ ಮಂಗಳೂರಿನ ಕದ್ರಿಯ ಗೋಕುಲ್ ಹಾಲ್ ನಲ್ಲಿ ಡಿ. 27ರಂದು ಗೌರವಾಧ್ಯಕ್ಷ ಕಿಶೋರ್ ಡಿ ಶೆಟ್ಟಿ ಹಾಗೂ ಅಧ್ಯಕ್ಷ ಮೋಹನ್ ಕೊಪ್ಪಲ ಕದ್ರಿ ಇವರ ನೇತ್ರತ್ವದಲ್ಲಿ ನಡೆಯಿತು.
ಸಭೆಯಲ್ಲಿ ಈಗಿರುವ ಸಂಸ್ಥೆಯ ಮೂಲ ಸ್ವರೂಪ ಉಳಿಸಿಕೊಂಡು, ಭವಿಷ್ಯದಲ್ಲಿ ಹೊಸ ಯೋಜನೆ, ಯೋಚನೆಗಳೊಂದಿಗೆ ಗಟ್ಟಿಯಾದ ಸಂಸ್ಥೆ ಕಟ್ಟಿ ಬೆಳೆಸಲು ಚರ್ಚೆ ನಡೆಸಲಾಯಿತು.ಮುಂದಿನ ವರ್ಷ ತುಳುಚಿತ್ರರಂಗಕ್ಕೆ 50ವರ್ಷ ಪೂರೈಸುವ ನಿಟ್ಟಿನಲ್ಲಿ ತುಳುಚಿತ್ರ ಸುವರ್ಣ ಮಹೋತ್ಸವ ಆಚರಿಸುವ ಬಗ್ಗೆಯೂ ತೀರ್ಮಾನಿಸಲಾಯಿತು.ನೂತನ ಸಮಿತಿಯ ನಿರ್ಧಾರದಂತೆ 2021ರ CPL ನಲ್ಲಿ ತುಳುಚಿತ್ರರಂಗದ ಕಲಾವಿದ ತಂತ್ರಜ್ಞರರಿಗೆ ಹೆಚ್ಚಿನ ಆಧ್ಯತೆ ನೀಡಲಾಗುವುದು ಹಾಗೂ ಟೆಲಿಚಿತ್ರ ಆಲ್ಬಂ ಕಲಾವಿದರಿಗೆ ಅವಕಾಶವನ್ನು ನೀಡದಿರಲು ತಿರ್ಮಾನಿಸಲಾಗಿದೆ ಒಕ್ಕೂಟಕ್ಕೆ ಎಲ್ಲಾ ವರ್ಗದ ಕಲಾವಿದರನ್ನು ಸದಸ್ಯರಾಗಿ ಸೇರಿಸಲಾಗುವುದು ಆದರೆ CPL ನಲ್ಲಿ ತುಳುಚಿತ್ರದ ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಮಾತ್ರ ಅವಕಾಶ ನೀಡಬೇಕು ಎನ್ನುವ ಸದಸ್ಯರ ಮನವಿಯನ್ನು ಪುರಸ್ಕರಿಸಿ ಈ ನಿರ್ಧಾರ ಕೈಗೊಳ್ಳಲಾಯಿತು.ನೂತನ ಕ್ರೀಡಾ ಸಮಿತಿಯ ಸಂಚಾಲಕರ ಸಲಹೆಯಂತೆ ಮುಂದಿನ ಮಾರ್ಚ್ ತನಕ ನಡೆಯುವ 5 ವಿಷೇಶ ಸಭೆಯಲ್ಲಿ ಗರಿಷ್ಠ 3 ಸಭೆಯಲ್ಲಿ ಭಾಗವಹಿಸುವ ಸದಸ್ಯರಿಗೆ ಮಾತ್ರ CPL2021ರಲ್ಲಿ ಆಡಲು ಅವಕಾಶ ನೀಡಲಾಗುವುದು ಎಂದು ತೀರ್ಮಾನಿಸಲಾಯಿತು.2020/21 ಸಾಲಿನ ಆಯ್ಕೆ ನಡೆಯಿತು ಅಧ್ಯಕ್ಷ ಮೋಹನ್ ಕೊಪ್ಪಲ ಕದ್ರಿ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಜತೆ ಕಾರ್ಯದರ್ಶಿ ಜೀವನ್ ಉಳ್ಳಾಲ್, ಕೋಶಾಧಿಕಾರಿ ವಿಶ್ವನಾಥ ಗುರುಪುರ ಅವರನ್ನು ಸರ್ವಾನುಮತದಿಂದ ಮರು ಆಯ್ಕೆ ಮಾಡಲಾಯಿತು.ರಂಗ್, ಚಿತ್ರದ ನಿರ್ದೇಶಕ OMK ನಿರ್ಮಾಪಕ ಸುಹಾನ್ ಪ್ರಸಾದ್ ಹಾಗೂ ನಿರ್ಮಾಪಕ ಸಚ್ಚಿನ್ ಶೆಟ್ಟಿ ಅವರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.ಯುವ ನಟ ನಿಕಿತ್ ಕೊಟ್ಟಾರಿ ಕ್ರೀಡಾ ಕಾರ್ಯದರ್ಶಿ ಆಗಿ ಆಯ್ಕೆ ಆದರೆ, ಸುಕೇಶ್ ಶೆಟ್ಟಿ, ಪ್ರಜ್ವಲ್ ಅತ್ತಾವರ್,ಪ್ರವೀಣ್ ಕೊಡೆಕಲ್,ಶರಣ್ ಕೈಕಂಬ ಅವರು ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಆಯ್ಕೆಯಾದರು.ಪ್ರಚಾರ ಸಮಿತಿ ಸಂಘಟಕರಾಗಿ ಯುವ ಲೇಖಕ ಜಿತೇಶ್ ಉಳಿಯ ಹಾಗೂ ಸಂದೇಶ್ ಸಾನು ಶೆಟ್ಟಿ, ಸಂಘಟನಾ ಕಾರ್ಯದರ್ಶಿಯಾಗಿ ಸ್ಥಾಪಕ ಸದಸ್ಯ ರಾಜೇಶ್ ಸ್ಕೈಲಾರ್ಕ್ ಆಯ್ಕೆಯಾದರು.ಗೌರವ ಸಲಹೆಗಾರರಾಗಿ ಪಮ್ಮಿ ಕೊಡಿಯಾಲ್ ಬೈಲ್, ಗೋಕುಲ್ ಕದ್ರಿ, ಸ್ಥಾಪಕಾದ್ಯಕ್ಷೆ ಅಶ್ವಿನಿ ಕೋಟ್ಯಾನ್ ರವರನ್ನು ನೇಮಿಸಲಾಯಿತು.CPL2021 ಕ್ಕೆ ನೂತನ ಕ್ರೀಡಾ ಸಮಿತಿ ರಚಿಸಲಾಯಿತು ಇದರಲ್ಲಿ ಅರ್ಜುನ್ ಕಾಪಿಕಾಡ್, ರೂಪೇಶ್ ಶೆಟ್ಟಿ, ಉದಯ್ ಪೂಜಾರಿ, ಅನೂಪ್ ಸಾಗರ್, ಪ್ರಕಾಶ್ ಶೆಟ್ಟಿ, ಸಂದೀಪ್ ಶೆಟ್ಟಿ ಇವರನ್ನು ನೇಮಿಸಲಾಗಿದೆ.ಕ್ರೀಡಾ ಕಾರ್ಯಕಾರಿ ಸಮಿತಿಯಲ್ಲಿ ಪ್ರಶಾಂತ್ ಶೆಟ್ಟಿ, ರಾಕೇಶ್ ದಿಲ್ಸೆ, ಸಿದ್ದಾರ್ಥ ಮೂಲ್ಯ, ಸುನೀಲ್ ಅಶೋಕ್ ನಗರ, ರಿಜ್ವಾನ್, ಪ್ರಶಾಂತ್ ಕಂಕನಾಡಿ, ತಾರನಾಥ್ ಉರ್ವ, ವಿಕ್ರಂ ಶೆಟ್ಟಿ ಸರಪಾಡಿ, ಗಣೇಶ್ ಮೂಲ್ಯ, ಹಾಗೂ ರಂಜಿತ್ ಶೆಟ್ಟಿಯವರನ್ನು ಆಯ್ಕೆ ಮಾಡಲಾಯಿತು.ಕಾರ್ಯಕಾರಿ ಸಮಿತಿಯಲ್ಲಿ ಶರತ್ ಪೂಜಾರಿ,ಅರುಣ್ ಶೆಟ್ಟಿ ಕಡಂದಲೆ, ಲಕ್ಷ್ಮೀಶ ಸುವರ್ಣ,ಅನೀಲ್ ಕರ್ಕೆರ, ಪ್ರಸಾದ್ ಕಂಕನಾಡಿ ಯವರನ್ನು ಆಯ್ಕೆ ಮಾಡಲಾಯಿತು.ಮಾಹಾ ಸಭೆಯಲ್ಲಿ ಕಿಶೋರ್ ಡಿ ಶೆಟ್ಟಿ, ಮೋಹನ್ ಕೊಪ್ಪಳ, ಅರ್ಜುನ್ ಕಾಪಿಕಾಡ್, ರೂಪೇಶ್ ಶೆಟ್ಟಿ, ಅನೂಪ್ ಸಾಗರ್, ಸಂದೀಪ್ ಶೆಟ್ಟಿ, ಶ್ರೇಯಸ್ಸ್ ಶೆಟ್ಟಿ, ಸ್ಥಾಪಕಾಧ್ಯಕ್ಷೆ ಅಶ್ವಿನಿ ಕೋಟ್ಯಾನ್, ಕೋಶಾಧಿಕಾರಿ ವಿಶ್ವಾಸ್ ಗುರುಪುರ, ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ, ಸ್ಥಾಪಕ ಸದಸ್ಯ ರಾಜೇಶ್ ಸ್ಕೈಲಾರ್ಕ್, ಜೊತೆ ಕಾರ್ಯದರ್ಶಿ ಜೀವನ್ ಉಳ್ಳಾಲ್, ಕ್ಯಾಟ್ಕದ ಎಲ್ಲಾ ಸದಸ್ಯರು ಬಾಗವಹಿಸಿದ್ದರು.ಕೋಶಾಧಿಕಾರಿ ವಿಶ್ವಾಸ್ ಗುರುಪುರ ಧನ್ಯವಾದದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.