ಪುತ್ತೂರು: ಪುತ್ತೂರಿನ ಅಕ್ಷಯ ಕಾಲೇಜಿನಲ್ಲಿ ಅಕ್ಷಯ ಗ್ರೂಪ್ಸ್ ಅಧ್ಯಕ್ಷರಾದ ಜಯಂತ್ ನಡುಬೈಲು ಅವರ ಐವತ್ತನೇ ವರ್ಷದ ಹುಟ್ಟುಹಬ್ಬವನ್ನು ಇತ್ತೀಚೆಗೆ ಕಾಲೇಜಿನ ಸಿಬ್ಬಂದಿಗಳೆಲ್ಲ ಸೇರಿ ಆಚರಿಸಿದರು.
ಈ ಸಂದರ್ಭದಲ್ಲಿ ಅಕ್ಷಯ ಕಾಲೇಜಿನ ನೂತನ ವೆಬ್ ಸೈಟ್ www.akshayacollegeputtur.com ನ್ನು ಅನಾವರಣಗೊಳಿಸಿ ಮಾತನಾಡಿದ ನಡುಬೈಲು ಅವರು, ಸಾರ್ವಜನಿಕರಿಗೆ ಹಾಗೂ ದೂರದ ವಿದ್ಯಾರ್ಥಿಗಳಿಗೆ ಕಾಲೇಜಿನ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡುವ ಸಲುವಾಗಿ ಈ ವೆಬ್ಸೈಟ್ ನ್ನು ರೂಪಿಸಲಾಗಿದ್ದು, ಇದು ಮುಂದಿನ ದಿನಗಳಲ್ಲಿ ಕಾಲೇಜಿಗೆ ಸೇರಬಯಸುವ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದಿಂದ ಹಲವು ಬಾರಿ ಪ್ರಥಮ ರಾಂಕುಗಳನ್ನು ಗಳಿಸಿಕೊಂಡಿರುವ ಅಕ್ಷಯ ಕಾಲೇಜು ಪುತ್ತೂರಿನ ಮೊದಲ ಡಿಸೈನಿಂಗ್ ಕಾಲೇಜಾಗಿದ್ದು, ಈ ಶೈಕ್ಷಣಿಕ ಸಾಲಿನಿಂದ ಬಿ.ಕಾಂ ಜೊತೆಗೆ ಏವಿಯೇಷನ್ ಮತ್ತು ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟನ್ನು ಪ್ರಾರಂಭಿಸಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ಲೋರಿಯಾ ಕಾಲೇಜಿನ ಸ್ಥಾಪಕಾಧ್ಯಕ್ಷ ಆನಂದ ಆಚಾರ್ಯ, ಪ್ರಾಂಶುಪಾಲರಾದ ಸಂಪತ್ ಪಕ್ಕಳ, ಅಡ್ಮಿನಿಸ್ಟ್ರೇಟಿವ್ ಅಧಿಕಾರಿ ಅರ್ಪಿತ್, ನಡುಬೈಲು ಅವರ ಪತ್ನಿ, ಗವರ್ನಿಂಗ್ ಕೌನ್ಸಿಲ್ ಸದಸ್ಯೆ ಕಲಾವತಿ ನಡುಬೈಲು, ಕಾಲೇಜಿನ ಸಿಬ್ಬಂದಿ ವರ್ಗದವರು, ಮತ್ತಿತರರು ಉಪಸ್ಥಿತರಿದ್ದರು.