ಮಂಗಳೂರು: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, SNDPS ಪ್ರಶಸ್ತಿ ಪುರಸ್ಕೃತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಮ್ಮೇಳನದ ‘ಹೃದಯವಂತರು’ ಬಿರುದು ಪಡೆದ, ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿಗಳ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ತತ್ವದೊಂದಿಗೆ ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬ ಉದ್ದೇಶದೊಂದಿಗೆ ನಿರಂತರ ಸಮಾಜಸೇವೆ ಮಾಡುತ್ತಿರುವ ಬಿರುವೆರ್ ಕುಡ್ಲ ಸಂಘಟನೆಯ ಅಂಗಸಂಸ್ಥೆಯಾದ ‘ಬಿರುವೆರ್ ಕುಡ್ಲ ಮಹಿಳಾ ವೇದಿಕೆ ಅಶೋಕ ನಗರ’ ವತಿಯಿಂದ ರಕ್ಷಾಬಂಧನ ಕಾರ್ಯಕ್ರಮವನ್ನು ಆ.21 ರಂದು ಕಮಿಷನರ್ ಆಫೀಸ್ ನಲ್ಲಿ ಆಚರಿಸಲಾಯಿತು.

ಬಿರುವೆರ್ ಕುಡ್ಲ ಮಹಿಳಾ ವೇದಿಕೆ ಸದಸ್ಯರು ಹಿಂದೂ ಸಂಪ್ರದಾಯದ ಪ್ರಕಾರ ಆರತಿ ಮಾಡಿ ಕಮಿಷನರ್ ರಾದ ಶಶಿಕುಮಾರ್ ಅವರಿಗೆ ರಕ್ಷಾಬಂಧನ ಕಟ್ಟಿ ಅವರಿಂದ ಆಶೀರ್ವಾದ ಪಡೆದರು. ಹಾಗೆಯೇ ಡೆಪ್ಯುಟಿ ಕಮಿಷನರ್ ಆದ ಹರಿರಾಮ್ ರವರಿಗೆ ಕೂಡ ರಕ್ಷಾಬಂಧನ ಕಟ್ಟಿ ಆಶೀರ್ವಾದ ಪಡೆದರು.

ಸಮಾಜಕ್ಕೆ ರಕ್ಷಣೆ ನೀಡುವ ಪೊಲೀಸ್ ಇಲಾಖೆಯ ಜೊತೆ ಬಿರುವೆರ್ ಕುಡ್ಲ ಮಹಿಳಾ ವೇದಿಕೆ ಸದಸ್ಯೆಯರು ವಿಭಿನ್ನ ರೀತಿಯಲ್ಲಿ ರಕ್ಷಾ ಬಂಧನವನ್ನು ಆಚರಿಸಿಕೊಂಡರು.

ಈ ಸಂದರ್ಭದಲ್ಲಿ ಅಧ್ಯಕ್ಷೆ ಕು. ಸೌಮ್ಯಾ ಪೂಜಾರಿ, ಉಪಾಧ್ಯಕ್ಷೆ ಭವ್ಯ, ಕಾರ್ಯದರ್ಶಿ ನಿರೀಕ್ಷಾ, ಜೊತೆ ಕಾರ್ಯದರ್ಶಿ ಭವಾನಿ ಹಾಗೂ ಬಿರುವೆರ್ ಕುಡ್ಲ ಮಹಿಳಾ ವೇದಿಕೆ ಅಶೋಕ ನಗರದ ಸಂಘಟಕಿ ಶ್ರೀಮತಿ ಸುಮಂಗಲ, ಭಾನುಮತಿ ಹಾಗೂ ಬಿರುವೆರ್ ಕುಡ್ಲ ಸದಸ್ಯೆಯರು ಉಪಸ್ಥಿತರಿದ್ದರು.
