ಕಲ್ಲಡ್ಕ: ಸಮುದಾಯ ಆರೋಗ್ಯ ಕೇಂದ್ರ ವಿಟ್ಲ ,ಉಪಕೇಂದ್ರ ವೀರಕಂಭ, ಗ್ರಾಮ ಪಂಚಾಯತ್ ವೀರಕಂಭ ಸಹಕಾರದೊಂದಿಗೆ ಉಚಿತ ಕೋವಿಡ್ ಲಸಿಕ ಶಿಬಿರವೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಭದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ವೀರಕಂಭ ಗ್ರಾಮದ ಪಂಚಾಯತ್ ಅಧ್ಯಕ್ಷರಾದ ದಿನೇಶ್ ರವರು ಗ್ರಾಮ ವ್ಯಾಪ್ತಿಯ ಜನರ ಆರೋಗ್ಯದ ರಕ್ಷಣೆಗೆ ಶ್ರಮಿಸುತ್ತಿರುವ ಗ್ರಾಮದ ಆರೋಗ್ಯ ಸಹಾಯಕಿಯರಿಗೆ ಹಾಗೂ ಆಶಾ ಕಾರ್ಯಕರ್ತರಿಗೆ ರಕ್ಷಾಬಂಧನದ ನಿಮಿತ್ತ ರಕ್ಷೆಯನ್ನು ಕಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ಜನಾರ್ಧನ ಗೋಳಿಮಾರು, ಜಯಪ್ರಸಾದ್ ಕೆಲಿಂಜ, ಶ್ರೀಮತಿ ಮೀನಾಕ್ಷಿ ಸುನಿಲ್, ಉದ್ಯಮಿ ಸಂದೀಪ್ ಕುಮಾರ್ ಶೆಟ್ಟಿ, ವೀರಕಂಬ ಬಿಲ್ಲವ ಸಂಘದ ಅಧ್ಯಕ್ಷ ಜಯಪ್ರಕಾಶ ತೆಕ್ಕಿಪಾಪು, ಮಜಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮೇಶ್ ಮೈರ ಮೊದಲಾದವರು ಉಪಸ್ಥಿತರಿದ್ದರು.






























