ಗ್ರಾಮ ಪಂಚಾಯತ್ ಚುನಾವಣೆ ಸುಸೂತ್ರವಾಗಿ ನೆರವೇರಿದೆ.. ಭರಪೂರ ಪ್ರಚಾರ, ಪಂಚಾಯಿತಿ ಗದ್ದುಗೆಯನೇರುವ ನಿಷ್ಠಾವಂತ ನಾಯಕನಿಗಾಗಿ ಭಾರೀ ಮಹತ್ವದ ಪೈಪೋಟಿಗೆ ಅಣಿಯಾಗಿ, ಎಲ್ಲೆಡೆ ಚುನಾವಣಾ ಕಹಳೆ ಮೊಳಗಿದ್ದು ಇದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಭಾರತೀಯ ಜನತಾ ಪಕ್ಷದ ಉಪಾಧ್ಯಕ್ಷರಾದ ಬೂಡಿಯಾರು ರಾಧಾಕೃಷ್ಣ ರೈ ಚುನಾವಣೆ ಹಿನ್ನೆಲೆಯಲ್ಲಿ ಭರವಸೆಯ ನುಡಿಗಳನ್ನಾಡಿದರು.
ಪುತ್ತೂರು ತಾಲೂಕಿನ ಚುನಾವಣಾ ಕಾರ್ಯ ಯಶಸ್ವಿಯಾಗಿ ನೆರವೇರಿದ್ದು, ಹಲವು ಮತಗಟ್ಟೆಗಳಿಗೂ ಭೇಟಿ ನೀಡಿದ ಬೂಡಿಯಾರು ರಾಧಾಕೃಷ್ಣ ರೈ ” ಈ ಬಾರಿ ಭಾರತೀಯ ಜನತಾ ಪಕ್ಷ ಮುಂಚೂಣಿಯಲ್ಲಿದ್ದು ಗೆಲುವಿನ ಹಾದಿಯನ್ನು ಸೇರುವ ಭರವಸೆಯನ್ನು ಈಗಾಗಲೇ ಮೂಡಿಸಿದೆ, ತಾಲೂಕಿನಲ್ಲಿ ಭಾಜಪಾ ತನ್ನ ಅತ್ಯುತ್ತಮ ಕಾರ್ಯಗಳಿಂದಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಹೀಗಾಗಿ ಪ್ರಜೆಗಳು ಕೂಡ ತಮ್ಮ ಆಯ್ಕೆಯನ್ನು ಭಾಜಪಾ ಪರವಾಗಿ ಇಟ್ಟಿದ್ದು, ಚುನಾವಣಾ ಅಖಾಡದ ಅಂತಿಮ ಗೆಲುವಿನ ಕರೆ ಭಾಜಪಾ ಪಾಲಿಗೆ ದೊರೆಯಲಿದೆ'”ಎಂದು ಹೇಳಿದರು.