ಪುತ್ತೂರು: ಯುವಕರಲ್ಲಿ ದೇಶಾಭಿಮಾನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪುತ್ತೂರಿನ ಯುವಕರಿಬ್ಬರು ಬೈಕ್ ನಲ್ಲಿ ಜಮ್ಮು ಕಾಶ್ಮೀರ ಲಡಾಕ್ ಪ್ರದೇಶಗಳಿಗೆ ಪ್ರವಾಸ ಮಾಡಲಿದ್ದಾರೆ.

ಪುತ್ತೂರಿನ ಪುರುಷರಕಟ್ಟೆ ನಿವಾಸಿಗಳಾದ ಇಮ್ರಾನ್ ಡಿ. ಡಾಟ್ಸ್ ಮತ್ತು ಶಾಹಿದ್ ಶೇಖ್ ಎಂಬವರು ಪ್ರಯಾಣ ಬೆಳೆಸುವ ಯುವಕರು. ಜಮ್ಮು ಕಾಶ್ಮೀರ ಹಾಗೂ ಲಡಾಕ್ ಸೇರಿದಂತೆ ದೇಶದ ವಿವಿಧ ಕಡೆ ಒಂದು ತಿಂಗಳ ಕಾಲ ಬೈಕ್ ನಲ್ಲಿ ಇವರು ಸಂಚರಿಸಲಿದ್ದು ಸುಮಾರು ಹತ್ತು ಸಾವಿರ ಕಿ.ಮೀ. ಪ್ರಯಾಣ ಮಾಡಲಿದ್ದಾರೆ.
ಕಳೆದ ಎರಡು ವರ್ಷಗಳಿಂದ ಇಟ್ಟುಕೊಂಡಿದ್ದ ಕನಸು ಈಗ ನನಸಾಗುತ್ತಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪುತ್ತೂರಿನಿಂದ ಪ್ರಯಾಣ ಆರಂಭಿಸಲಿರುವ ಇವರ ಪ್ರಯಾಣಕ್ಕೆ ದರ್ಬೆಯಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಯವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ, ಆಧ್ಯ ಬ್ಯಾಗ್ಸ್ ಮಾಲಕ ಅಶೋಕ್ ರಾವ್ ಬಪ್ಪಳಿಗೆ, ರೀಗಲ್ ಬೇಕರಿ ಮಾಲಕ ಶರೀಫ್ ಬಲ್ನಾಡು ಉಪಸ್ಥಿತರಿದ್ದರು.






























