ಪುತ್ತೂರು: ಆರ್ಯಾಪು ಗ್ರಾಮ ಪಂಚಾಯತ್ ಒಳಪಟ್ಟ ಕುರಿಯ ಗ್ರಾಮದ ಮಲಾರ್ ನಲ್ಲಿ ವಾಸವಾಗಿರುವ ದಲಿತ ಕುಟುಂಬದ ಅಣ್ಣ ತಂಗಿಯಾದ ಗುರುವ ಮತ್ತು ಭಾಗೀ ಯವರು ಸುಮಾರು 50 ವರ್ಷಗಳಿಂದ ಸಣ್ಣ ಗುಡಿಸಲಿನಲ್ಲಿ ವಾಸವಾಗಿದ್ದು, ಈ ಮನೆಗೆ ಗೋಡೆಯಿಲ್ಲ, ವಿದ್ಯುತ್ ಸಂಪರ್ಕವಿಲ್ಲ, ಬಾಗಿಲಿಲ್ಲ, ಅಷ್ಟೇ ಅಲ್ಲದೇ ರೇಶನ್ ಕಾರ್ಡ್ ಇದ್ರೂ ಕೂಡ ಅಕ್ಕಿ ಸಿಗುತ್ತಿಲ್ಲ ಜೊತೆಗೆ ನೀರಿನ ಸಂಪರ್ಕವಿಲ್ಲ, ಶೌಚಾಲಯ ವ್ಯವಸ್ಥೆಯೂ ಇಲ್ಲದೇ ಜೀವನ ಸಾಗಿಸುವಂತಾಗಿದೆ.
ಭಾಗ್ಯ ಜ್ಯೋತಿ ಮೂಲಕ ಇವರ ಮನೆಗೆ ವಿದ್ಯುತ್ ಸಂಪರ್ಕ ಮಾಡಲಾಗಿದ್ದರು ಒಂದು ಹೊತ್ತಿನ ಊಟಕ್ಕೂ ಬೇಡುವ ಈ ಕುಟುಂಬ ಬಿಲ್ ಕಟ್ಟಡ ಕಾರಣ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು. ಈ ಬಗ್ಗೆ ಅರಿತ ಪುತ್ತೂರು ಕಾಂಗ್ರೆಸ್ ಎಸ್. ಸಿ ಘಟಕವೂ ಕಡು ಬಡತನದಲ್ಲಿರುವ ಈ ಕುಟುಂಬಕ್ಕೆ ವಿದ್ಯುತ್ ಸಂಪರ್ಕವನ್ನು ಒದಗಿಸುವ ಮೂಲಕ ಕತ್ತಲಿನಲ್ಲೇ ಜೀವನ ಸಾಗಿಸುತ್ತಿದ್ದ ಅಣ್ಣ-ತಂಗಿಗೆ ಬೆಳಕಿನ ಸ್ವಾತಂತ್ರ್ಯವನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಯಂಗ್ ಬ್ರಿಗೇಡ್ ಅಧ್ಯಕ್ಷ ಅಭಿಷೇಕ್, ಪುತ್ತೂರು ಒಂದು ಬಡತನ ಮುಕ್ತ ತಾಲೂಕು ಆಗಬೇಕು ಎಂಬುದು ನಮ್ಮೆಲ್ಲರ ಆಶಯ. ಬಡವರ, ದಲಿತರ ಮನೆಗಳು ರಿಪೇರಿ ಇಲ್ಲದೇ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿರುವವರಿಗೇ ಕಾಂಗ್ರೆಸ್ ಎಸ್. ಸಿ ಘಟಕ ಎಲ್ಲಾ ಸಮಯದಲ್ಲಿಯೂ ಸಹಾಯ ಹಸ್ತವನ್ನು ನೀಡುತ್ತಿದೆ. ಅದೇ ರೀತಿ ಗುರುವ ಮತ್ತು ಭಾಗೀ ರವರ ಮನೆಗೆ ಏಳು, ಎಂಟು ವರ್ಷಗಳಿಂದ ವಿದ್ಯುತ್ ಸೌಕರ್ಯವಿರಲಿಲ್ಲ, ಏಳು ವರ್ಷದಲ್ಲಿ ಆಗದನ್ನು ಕಾಂಗ್ರೆಸ್ ಎಸ್. ಸಿ ಘಟಕವೂ ಏಳು ದಿನಗಳಲ್ಲಿ ಮಾಡಿಕೊಟ್ಟಿದೆ.
ಅದೇ ರೀತಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಎಸ್. ಸಿ ಘಟಕ ಮತ್ತು ಊರಿನವರ ಸಹಕಾರದೊಂದಿಗೆ ಅವರಿಗೆ ಹೆಚ್ಚಿನ ಸೌಕರ್ಯಗಳನ್ನು ಒದಗಿಸಿಕೊಡುವ ಸಂಪೂರ್ಣ ಪ್ರಯತ್ನವನ್ನು ಮಾಡುತ್ತೇವೆ ಎಂದರು. ಅದೇ ರೀತಿ ಒಂದು ತಿಂಗಳೊಳಗೆ ಅವರಿಗೆ ರೇಶನ್ ಸಿಗುವ ವ್ಯವಸ್ಥೆಯನ್ನು ಮಾಡಿಕೊಡುತ್ತೇವೆ ಎಂದರು.
ಎಸ್. ಸಿ ಘಟಕದ ಅಧ್ಯಕ್ಷ ಕೇಶವ ಪಡೀಲ್ ಮಾತನಾಡಿ, ಸುಮಾರು ವರ್ಷಗಳಿಂದ ಗುರುವ ಮತ್ತು ಭಾಗೀ ಯವರು ಕಷ್ಟದ ಜೀವನ ಸಾಗಿಸುತ್ತಿದ್ದಾರೆ. ನಾವು ಕೂಡ ಬಡತನದಿಂದಲೇ ಬಂದವರು ಆದರೇ ಇವರ ಪರಿಸ್ಥಿತಿಯನ್ನು ಕಂಡು ತುಂಬಾ ಬೇಸರವಾಯಿತು. ಈಗಾಗಲೇ ಪಂಚಾಯತ್ ಪಿಡಿಓ ಜೊತೆ ಮಾತನಾಡಿ ಅವರಿಗೆ ಮೂಲಭೂತ ಸೌಕರ್ಯ ಒದಗಿಸುವ ಬಗ್ಗೆ ಪ್ರಸ್ತಾಪಿಸಿದ್ದೇವೆ ಎಂದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಗುರುವ ರವರು, ಸೋರುತ್ತಿರುವ ಮನೆಗೆ ಪ್ಲಾಸ್ಟಿಕ್ ಹಾಕಿ ನೀರು ಬೀಳದಂತೆ ಮಾಡಿದ್ದಾರೆ. ಆಧಾರ್ ಕಾರ್ಡ್ ಮಾಡಿಕೊಟ್ಟಿದ್ದಾರೆ. ಮನೆ ದುರಸ್ಥಿ ಮಾಡಿ ಕೊಡುವುದಾಗಿ ಭರವಸೆ ನೀಡಿದ್ದಾರೆ. ಎಂಟು ವರ್ಷಗಳಿಂದ ವಿದ್ಯುತ್ ಸಂಪರ್ಕ ಇರಲಿಲ್ಲ, ಕಾಂಗ್ರೆಸ್ ಎಸ್. ಸಿ ಘಟಕ ವತಿಯಿಂದ ವಿದ್ಯುತ್ ಸಂಪರ್ಕ ಕಲ್ಪಿಸಿ ನಮಗೆ ಬಹಳ ಉಪಕಾರ ಮಾಡಿಕೊಟ್ಟಿದ್ದಾರೆ ಎಂದರು.