ವಿಟ್ಲ: ಕಲ್ಲಡ್ಕ-ಕಾಂಞಂಗಾಡ್ ಅಂತರಾಜ್ಯ ಹೆದ್ದಾರಿಯ ಅಡ್ಯನಡ್ಕದಲ್ಲಿ ನೂತನವಾಗಿ ಇಂಡಿಯನ್ ಆಯಿಲ್ ನ ‘ಕಾಡು ಫ್ಯೂಲ್ಸ್’ ಪೆಟ್ರೋಲ್ ಪಂಪ್ ಆ.27 ರಂದು ಶುಭಾರಂಭಗೊಂಡಿತು.
ನೂತನ ಪಂಪ್ ಅನ್ನು ತೆರಿಗೆ ಸಲಹೆಗಾರ ಗಣೇಶ್ ಭಟ್ ಉದ್ಘಾಟಿದರು. ವೇದಮೂರ್ತಿ ಬಾಲಕೃಷ್ಣ ಕಾರಂತ ಎರುಂಬು, ಸಹಾಯಕ ತಿರುಮಲೇಶ್ವರ ಭಟ್ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು.
ಭಾಗವತ ಹೊಸಮೂಲೆ ಗಣೇಶ್ ಭಟ್, ಎಪಿಎಂಸಿ ಮಾಜಿ ಅಧ್ಯಕ್ಷ ಪದ್ಮನಾಭ ರೈ, ವಿಟ್ಲ ಗ್ರಾಮೀಣ ಸಹಕಾರಿ ಸಂಘದ ಅಧ್ಯಕ್ಷ ಜಗನ್ನಾಥ ಸಾಲಿಯಾನ್, ಕೇಪು ಗ್ರಾ.ಪಂ ಅಧ್ಯಕ್ಷೆ ಯಶಸ್ವಿನಿ ಶಾಸ್ತ್ರಿ, ಪುಣಚ ಗ್ರಾ.ಪಂ ಅಧ್ಯಕ್ಷ ರಾಮಕೃಷ್ಣ, ಎಣ್ಮಕಜೆ ಗ್ರಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್, ಐತಪ್ಪ ಕುಲಾಲ್, ಕೇಪು ಗ್ರಾ.ಪಂ ಉಪಾಧ್ಯಕ್ಷ ರಾಘವ ಸಾರಡ್ಕ, ಸದಸ್ಯರಾದ ಅಬ್ದುಲ್ ಕರೀಂ ಕುದ್ದುಪದವು, ಸುಮಿತ್ರ ಜೆ ಪೂಜಾರಿ, ಜಗಜೀವನ್ ರಾಮ್ ಶೆಟ್ಟಿ, ನಿವೃತ್ತ ಶಿಕ್ಷಕ ಬಟ್ಯಪ್ಪ ಶೆಟ್ಟಿ, ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಪ್ರಭಾಕರ ಶೆಟ್ಟಿ, ಕೇಪು ಗ್ರಾ.ಪಂ ಸದಸ್ಯ ಕೃಷ್ಣ ಭಟ್, ಮರಕ್ಕಿನಿ, ಹರಿಕೃಷ್ಣ ಶೆಟ್ಟಿ ಮೂಡಂಬೈಲ್ , ಅಳಿಕೆ ಸತ್ಯಸಾಯಿ ವಿದ್ಯಾ ಸಂಸ್ಥೆಯ ಪ್ರಾಂಶುಪಾಲ
ಶಿವಕುಮಾರ್ ಎಂ , ಶ್ರೀಧರ್ ಅಳಿಕೆ, ಕರ್ನಾಟಕ ಬ್ಯಾಂಕ್ ನ ವ್ಯವಸ್ಥಾಪಕ ರಾಮಕೃಷ್ಣ, ರಘುನಾಥ ಶೆಟ್ಟಿ ಮೂಡಂಬೈಲ್, ಸುಧಾಕರ ಕೇಪು, ಉಮೇಶ್ ಪುತ್ತೂರು, ಬಾಲಕೃಷ್ಣ ಶೆಟ್ಟಿ ಬೆಗ್ರೋಡಿ ಭಾಗವಹಿಸಿ ನೂತನ ಸಂಸ್ಥೆಗೆ ಶುಭಹಾರೈಸಿದರು.
ಮಾಲಕರಾದ ದೇವದಾಸ್ ಎಂ ಮತ್ತು ಸುಪ್ರಿಯಾ ದೇವದಾಸ್ ಅತಿಥಿಗಳನ್ನು ಸ್ವಾಗತಿಸಿದರು. ಇಲ್ಲಿ ಲಘು ಹಾಗೂ ಘನ ವಾಹನಗಳಿಗೆ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಹಾಗೂ 24×7 ನೀರಿನ ವ್ಯವಸ್ಥೆ ಮಾಡಲಾಗಿದೆ. ಹಾಗೂ 24×7 ಪೆಟ್ರೋಲ್ ವ್ಯವಸ್ಥೆಯೂ ಲಭ್ಯವಿದೆ. ಗ್ರಾಹಕರಿಗೆ ಅನುಕೂಲವಾಗುವಂತೆ ಸೇವೆಯನ್ನು ನೀಡಲಾಗುತ್ತದೆ. ಗ್ರಾಹಕರು ಸಹಕರಿಸುವಂತೆ ಸಂಸ್ಥೆಯ ಮಾಲಕರದಂತಹ ಸುಪ್ರಿಯಾ ದೇವದಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇರಳ ಗಡಿ ಭಾಗದಲ್ಲಿ ಈ ಪಂಪ್ ನಿರ್ಮಾಣಗೊಳ್ಳುತ್ತಿದ್ದು, ಗಡಿ ಭಾಗದ ಜನರಿಗೆ ತುಂಬಾನೇ ಪ್ರಯೋಜನವಾಗಲಿದೆ.