ಪುತ್ತೂರು: ಹಿರಿಯ ನ್ಯಾಯವಾದಿ ಬೆಟ್ಟ ಈಶ್ವರ ಭಟ್ ಅವರ ತಾಯಿ, ದಿ| ಬೆಟ್ಟ ರಾಮಕೃಷ್ಣ ಭಟ್ ರವರ ಪತ್ನಿ ಶ್ರೀಮತಿ ಸರಸ್ವತಿ (85) ರವರು ಆ.27 ರಂದು ಬೆಳಿಗ್ಗೆ ನಿಧನರಾದರು.
ವಯೋಸಹಜ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಶ್ರೀಮತಿ ಸರಸ್ವತಿ ರವರು ಕೆಲವು ದಿನಗಳ ಹಿಂದೆ ಪುತ್ತೂರಿನಲ್ಲಿ ನ್ಯಾಯವಾದಿಯಾಗಿರುವ ಪುತ್ರ ಬೆಟ್ಟ ಈಶ್ವರ ಭಟ್ ರವರ ಮನೆಯಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮುಂಜಾನೆ ಕೊನೆಯುಸಿರೆಳೆದರು.ಮೃತ ಶರೀರವನ್ನು ಇಂದು ಅವರ ಹಿರಿಯ ಪುತ್ರ ಬೆಟ್ಟ ರಾಜರಾಂ ಭಟ್ ರವರ ಮನೆಗೆ ಕೊಂಡುಹೋಗಿ ಅಂತ್ಯಸಂಸ್ಕಾರ ನೆರವೇರಲಿದೆ.
ಮೃತರು ಪುತ್ರರಾದ ಕಾಂಗ್ರೆಸ್ ಮುಖಂಡ, ಕೃಷಿಕ ಬೆಟ್ಟ ರಾಜರಾಂ ಭಟ್, ಪುತ್ತೂರಿನ ನ್ಯಾಯವಾದಿ ಬೆಟ್ಟ ಈಶ್ವರ ಭಟ್, ಪುತ್ರಿಯರಾದ ಶ್ರೀಮತಿ ಕುಸುಮ ಸುಬ್ರಾಯ ಭಟ್ ಪುತ್ತೂರು, ಶ್ರೀಮತಿ ಸುಮತಿ ಶಿವರಾಮ ಭಟ್ ಅಳಿಕೆ ಹಾಗೂ ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.