ಈ ವರ್ಷದ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಅಷ್ಟಮಿಯ ಮುಂಚಿನ ದಿನ ಆ.29 ರಂದು ಬೆಳಿಗ್ಗೆ ಪುರಂದರ ದಾಸರ ರಚನೆಯ ‘ಹರಿಕುಣಿದಾ ನಮ್ಮ ಹರಿ ಕುಣಿದಾ’ ಭಕ್ತಿಗೀತೆ ವಿಭಿನ್ನ ರೀತಿಯ ವಿಡಿಯೋ ಆಲ್ಬಮ್ ಬಿಡುಗಡೆಗೊಳ್ಳಲಿದೆ..
ಕಳೆದ ವರ್ಷ ಕನಕ ದಾಸರ ಪದ ಈಶ ನಿನ್ನ ಚರಣ ಹಾಗೂ ತೋಳು ರಂಗ ಜಗದೀಶ್ ಪುತ್ತೂರು ಯೂಟ್ಯೂಬ್ ಚಾನಲ್ ನಲ್ಲಿ ಮಿಲಿಯನ್ ಗಟ್ಟಲೆ ವಿವ್ ಸ್ ಪಡೇ ದ ಮೊದಲ ಆಲ್ಬಮ್ ಆಗಿತ್ತು.. ಈಗ 2ನೆ ವರ್ಷ ಕಾಣಿಕೆ.. ಪುರಂದರ ದಾಸರ ರಚನೆ. ಹರಿಕುಣಿದಾ ನಮ್ಮ ಹರಿ ಕುಣಿದಾ… ಈ ಭಕ್ತಿಗೀತೆ ಎಲ್ಲಾ ಭಜನಾ ತಂಡಕ್ಕೆ ಭಜನೆ ಹೇಳುವ ರೀತಿಯಲ್ಲಿ ಭಜಕರಿಗಾಗಿಯೇ.. ಸಂಗೀತ ನಿರ್ದೇಶನ ಮಾಡಿದ್ದಾರೆ ಜಗದೀಶ್ ಪುತ್ತೂರ್ ರವರು. ಈ ಭಕ್ತಿಗೀತೆ ಮಾತ್ರವಲ್ಲದೆ ನೃತ್ಯಕ್ಕಾಗಿಯೇ ಮಕ್ಕಳಿಗೆ ಹೇಳಿ ಮಾಡಿಸಿದಂತಿದೆ..
ಈ ಆಲ್ಬಮ್ ನ ನಿರ್ಮಾಣ ದಿ| ಶಾಮಣ್ಣ ನಾರಾಯಣಪ್ಪ ಶ್ರೀಮತಿ ಕೌಸಲ್ಯ ಕೊಂಡಂದ ರಾಮುಲು ಮತ್ತು ಫ್ಯಾಮಿಲಿ ನಿರ್ಮಾಣ ಮಾಡಿದ್ದಾರೆ ಈ ವಿಡಿಯೋ ಆಲ್ಬಮ್ ನ್ನಲಿ 3 ಗಾಯಕಿಯರು ಅಲ್ಲದೆ 3 ರೀತಿಯಲ್ಲಿ ಪುಟ್ಟ 6 ಮಕ್ಕಳು ರಾಧಾಕೃಷ್ಣರಾಗಿ ಅವರ ನೃತ್ಯವು ಒಳಗೊಂಡಿದೆ….
ಈ ಭಕ್ತಿಗೀತೆ ವಿಡಿಯೋ ಆಲ್ಬಮ್ ಅನ್ನು ಕಟಪಾಡಿ ಶ್ರೀದ್ವಾರಕಾಮಯಿ ಸಾಯಿ ಮಂದಿರದಲ್ಲಿ ಶ್ರೀಸಾಯಿ ಈಶ್ವರ್ ಗುರೂಜಿಯವರು ಬಿಡುಗಡೆ ಗೊಳಿಸಲಿದ್ದಾರೆ.
ಗಾಯಕಿರಾಗಿ ವಿದ್ಯಾ ಸುವರ್ಣ, ಸಮನ್ವಿ ರೈ, ಸಾಹಿತ್ಯ ಜಗದೀಶ್ ಆಚಾರ್ಯ ಪುತ್ತೂರ್ ಮತ್ತು ಪುಟ್ಟ ಕಲಾವಿದರಾಗಿ ಜ್ಞಾನ ರೈ ಕುರಿಯ, ಆಜ್ಞಾ ರೈ ಕುರಿಯ, ಸಾತ್ವಿ ಜಿ ರೈ ಈಶ್ವರ ಮಂಗಲ, ಅಧಿತ್ರಿ ಅಚಾರ್ಯ, ವೃತಿಕ ಕಾಮತ್, ಅರ್ಚನ ಸಂಪ್ಯಾಡಿ, ಹಾಗೂ ಹಾಡಿನ ಛಾಯಾಗ್ರಹಣ ಅರುಣ್ ರೈ ಮತ್ತು ಸಂಕಲನ ಜೆಪಿ ಬಂದ್ಯೋಡ್, ಮೇಕಪ್ ಪ್ರೇಮ್ ರಾಜ್ ಆರ್ಲ ಪದವು ಮಾಡಿದ್ದಾರೆ.