ಪುತ್ತೂರು : ಕೆದಂಬಾಡಿಯ ಗ್ರಾಮ ಪಂಚಾಯತ್ ನಲ್ಲಿ ಪಕ್ಷೇತರ ಅಭ್ಯರ್ಥಿ ಪ್ರವೀಣ್ ಶೆಟ್ಟಿ ತಿಂಗಳಾಡಿಯವರು ಭಾರೀ ಅಧಿಕ ಮತದಿಂದ ಗೆಲುವು ಸಾಧಿಸಿದ್ದಾರೆ. ಕಳೆದ ಬಾರಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಆಯ್ಕೆಯಾದ ಇವರು ಬಂಡಾಯವೆದ್ದು ಕಾಂಗ್ರೆಸ್ ಬೆಂಬಲದೊಂದಿಗೆ ಪಂಚಾಯತ್ ಅಧ್ಯಕ್ಷರಾಗಿ ಅಧಿಕಾರದ ಗದ್ದುಗೆ ಹಿಡಿದಿದ್ದರು. ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿ ಗೆಲುವಿನ ನಗೆ ಬೀರಿದ್ದಾರೆ.
ಪುತ್ತೂರು ತಾಲೂಕಿನ ಕೆದಂಬಾಡಿ ಪಂಚಾಯ್ತಿಯ ಎಲ್ಲಾ 10 ಸ್ಥಾನಗಳ ಫಲಿತಾಂಶ ವೂ ದೊರೆತಿದ್ದು, 7 ಸ್ಥಾನಗಳಲ್ಲಿ ಅಗ್ರಸ್ಥಾನ ಬಿಜೆಪಿ ಬೆಂಬಲಿತರ ಪಾಲಿಗೆ ದೊರೆತಿದೆ. ಉಳಿದ ಮೂರು ಸ್ಥಾನಗಳ ಪೈಕಿ ಕಾಂಗ್ರೆಸ್ ಬೆಂಬಲಿತರು 2 ಸ್ಥಾನದಲ್ಲಿ ವಿಜಯಿಗಳಾಗಿದ್ದು, 1 ಸ್ಥಾನ ಪಕ್ಷೇತರ ಪಾಲಾಗಿದೆ.