ಬೆದ್ರೋಡಿ: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಜತ್ತೂರು ಗ್ರಾಮದ ಬೆದ್ರೋಡಿ ಎಂಬಲ್ಲಿ ಸೋಮವಾರ ಸಾಯಂಕಾಲ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮೆಕ್ಯಾನಿಕ್’ಗಳ ಸಾವು ಸಂಭವಿಸಿದ್ದೂ ಆ ಅಪಘಾತಕ್ಕೆ ಕಾರಣವಾದ ಪಿಕಪ್ ಡ್ರೈವರ್ ಅನ್ನು ಪುತ್ತೂರು ಸಂಚಾರಿ ಪೊಲೀಸರು ಬಂಧಿಸಿದ್ದಾರೆ.
ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಅಹ್ಮದ್ ಜಾವೇದ್ (19) ಬಂಧಿತ ಪಿಕಪ್ ಡ್ರೈವರ್. ಈತನ ವಿರುದ್ದ IPC ಸೆಕ್ಷನ್ 279, 304(A) ರಂತೆ ಪ್ರಕರಣ ದಾಖಲಾಗಿದೆ.
ಘಟನೆ ಸಂಭವಿಸಿದ ತಕ್ಷಣ ಕಾರೊಂದರಲ್ಲಿ ಬಂದ ತಂಡವೊಂದು ಮಿಂಚಿನ ವೇಗದಲ್ಲಿ ಆರೋಪಿ ಚಾಲಕನನ್ನು ಅಪಘಾತದ ಸ್ಥಳದಿಂದ ಪರಾರಿಯಾಗಲು ಸಹಕರಿಸಿತಾದರೂ, ಘಟನಾ ಸ್ಥಳದಲ್ಲಿ ದೊರೆತ ದಾಖಲೆಯನ್ನು ಅನುಸರಿಸಿ ನಡೆಸಿದ ಪೊಲೀಸ್ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ರಸ್ತೆ ಬದಿ ಕೆಟ್ಟು ನಿಂತಿದ ಲಾರಿ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹಳೇ ಮಾರ್ಕೆಟ್ ರಸ್ತೆಯ ನಿವಾಸಿ ಅಸೀಪ್ ಎಂಬವರಿಗೆ ಸೇರಿದಾಗಿತ್ತು ಅವರು ನೀಡಿದ ದೂರಿನಂತೆ ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



























