ಬೆಳ್ತಂಗಡಿ: ದುಬೈನಲ್ಲಿ ವೃತ್ತಿ ನಿರ್ವಹಿಸುತ್ತಿರುವ ಪತ್ನಿಗೆ ಉಗ್ರ ಸಂಘಟನೆಯೊಂದಿಗೆ ನಂಟು ಇದೆ ಎಂದು ಆರೋಪಿಸಿ ಪತಿಯು ದ.ಕ.ಜಿಲ್ಲಾ ಎಸ್ಪಿಗೆ ದೂರು ನೀಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ನೆರಿಯಾದಲ್ಲಿ ನಡೆದಿದ್ದು, ಚಿದಾನಂದ ಕೆ.ಆರ್. ಎಂಬುವರು ಎಸ್ಪಿಗೆ ದೂರು ನೀಡಿದ್ದರು. ಈ ನಿಟ್ಟಿನಲ್ಲಿ ಇಂದು ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲಾ ತಂಡವೂ ಚಿದಾನಂದ ರವರ ಮನೆಗೆ ಭೇಟಿ ನೀಡಿ ದೂರು ನೀಡಿರುವ ಬಗ್ಗೆ ಮಾಹಿತಿಯನ್ನು ಕಲೆ ಹಾಕಿ, ಮನೆಯರಿಗೆ ಧೈರ್ಯ ತುಂಬಿದರು.
ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲಾ ತಂಡ ಮತ್ತು ಸ್ಥಳೀಯರು ಚಿದಾನಂದರವರ ಮನೆಗೆ ಭೇಟಿ ನೀಡಿ ಮಹಿಳೆಗೆ ಉಗ್ರ ಸಂಘಟನೆ ಜೊತೆ ನಂಟಿರುವ ಬಗ್ಗೆ ಮನೆಯರಿಂದ ಮಾಹಿತಿ ಪಡೆದು ಮನೆಯವರಿಗೇ ಈ ವಿಷಯವಾಗಿ ಧೃತಿಗೆಡದಂತೆ ಧೈರ್ಯ ಹೇಳಿದರು.