ಪುತ್ತೂರು: ಕೆಲದಿನಗಳ ಹಿಂದೆ ಕುಂಬ್ರದಲ್ಲಿ ನಡೆದ ಟಿಪ್ಪರ್ ಮತ್ತು ಬೈಕ್ ನಡುವಿನ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕುಂಬ್ರ ಮೆಸ್ಕಾಂ ನ ಪವರ್ ಮ್ಯಾನ್ ಪರಶುರಾಮ್ (30) ಸೆ.4 ರಂದು ನಿಧನರಾದರು.
ಬಾಗಲಕೋಟ ಮೂಲದ ಪರಶುರಾಮ್ ರವರು ಕುಂಬ್ರ ಮೆಸ್ಕಾಂ ನಲ್ಲಿ ಈಶ್ವರಮಂಗಲ ಪವರ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

ಕೆಲ ದಿನಗಳ ಹಿಂದೆ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೇ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.