ಪುತ್ತೂರು: ಸಾಜ ದ.ಕ.ಜಿ.ಹಿ. ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ದುರ್ಗಾ ವೆಂಕಟರಮಣ ಘಟಕ ಸಾಜ ಹಾಗೂ ಶಿವಾಜಿ ಘಟಕ ಇರ್ದೆ ಇದರ ವತಿಯಿಂದ ಎ.ಜೆ ಆಸ್ಪತ್ರೆ ರಕ್ತ ನಿಧಿ ಘಟಕ ಮಂಗಳೂರು ಸಹಯೋಗದೊಂದಿಗೆ ಸೆ.5 ರಂದು ರಕ್ತದಾನ ಶಿಬಿರ ನಡೆಯಿತು.
ಕಾರ್ಯಕ್ರಮವನ್ನು ವಿಶ್ವ ಹಿಂದೂ ಪರಿಷದ್ ಬಜರಂಗದಳ ದುರ್ಗಾ ವೆಂಕಟರಮಣ ಘಟಕ ಸಾಜದ ಸಂಚಾಲಕ ಭವಿಷ್ಯತ್ ಪೂಜಾರಿ ಹಸಂತಡ್ಕ ಸ್ವಾಗತಿಸಿದರು. ವಿಶಾಕ್ ಶಶಿಹಿತ್ಲು ರಕ್ತದಾನಕ್ಕೆ ಶುಭ ಹಾರೈಸಿದರು.
ಮುರಳಿಕೃಷ್ಣ ಭಟ್ ಹಸಂತಡ್ಕ ಮಾತನಾಡಿ ಯಾವ ಸಂದರ್ಭದಲ್ಲಿಯೂ ರಕ್ತದ ಅವಶ್ಯಕತೆ ಇದ್ದಲ್ಲಿ ಸಂಘದ ಕಾರ್ಯಕರ್ತರೂ ಸದಾ ಸಿದ್ದ. ಇಲ್ಲಿನ ಸಂಘದ ಸಂಘದ ಮುಖಾಂತರ ಇನ್ನಷ್ಟು ಅಭಿವೃದ್ದಿ ಕಾರ್ಯಕ್ರಮಗಳು ನಡಿಯಲಿ ಎಂದು ಹೇಳಿದರು.
ಮಂಗಳೂರು ಎಜೆ ಆಸ್ಪತ್ರೆಯ ರಕ್ತ ನಿಧಿ ಘಟಕದ ಮ್ಯಾನೇಜರ್ ಗೋಪಾಲಕೃಷ್ಣ ಮಾತನಾಡಿ, ಪ್ರಸ್ತುತತ ದಿನಗಳಲ್ಲಿ ರಕ್ತದ ಬೇಡಿಕೆ ಬಹಳಷ್ಟು ಹೆಚ್ಚಿದೆ. ಆ ಕಾರಣದಿಂದ ಇಂತಹ ಶಿಬಿರಗಳು ರಕ್ತದ ಪೂರೈಕೆಗೆ ಸಹಕರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ರಾಧಾಕೃಷ್ಣ ಆಳ್ವ ಸಾಜ, ಹರೀಶ್ ದೋಲ್ಪಡಿ, ಅಕ್ಷಯ್ ಶೆಟ್ಟಿ ಸಲ್ಪಾಜೆ, ಗಣೇಶ್ ಭಟ್ ಸುಧನಡ್ಕ, ಗಣೇಶ್ ಸಾಜ, ಧನಂಜಯ ಜಯಂತ ಸಾಜ, ರವಿಚಂದ್ರ ಸಾಜ ಮತ್ತು ವಸಂತಿ ಮತ್ತಿತರರು ಉಪಸ್ಥಿತರಿದ್ದರು.