ಪುತ್ತೂರು: ನರಿಮೊಗರು ವಲಯ ಕಾಂಗ್ರೆಸ್ ಸಮಿತಿಯಿಂದ ಕಾಂಗ್ರೆಸ್ ಸಭೆಯೂ ವಲಯ ಕಾಂಗ್ರೆಸ್ ಉಪಾಧ್ಯಕ್ಷ ಇಲಿಯಾಸ್ ಮನೆಯಲ್ಲಿ ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಪುರುಷರಕಟ್ಟೆ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಭೆಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಅಮಲ ರಾಮಚಂದ್ರ ರವರು ಪಕ್ಷ ಸಂಘಟಣೆಯ ರೂಪುರೇಷೆಯನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಉಪಾಧ್ಯಕ್ಷರಾದ ಯಾಕೂಬು ಮುಲಾರ್, ಶ್ರೀಮತಿ ವಿಶಾಲಾಕ್ಷಿ ಬನ್ನೂರು, ಬ್ಲಾಕ್ ಪ್ರದಾನ ಕಾರ್ಯದರ್ಶಿ ಪೂರ್ಣೇಶ್ ಭಂಡಾರಿ, ಬ್ಲಾಕ್ ಎಸ್ ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ್, ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಉಪಾಧ್ಯಕ್ಷ ರವೀಂದ್ರ ರೈ ನೆಕ್ಕಿಲು, ನೆರಿಮೊಗರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಚಂದ್ರಕಲಾ ಮನಿಯ, ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯ ಪರಮೇಶ್ವರ ಭಂಡಾರಿ, ಗ್ರಾಮ ಪಂಚಾಯತ್ ಸದಸ್ಯರಾದ ಹೊನ್ನಪ್ಪ ಪೂಜಾರಿ ಕೈಂದಾಡಿ,ನೆರಿಮೊಗರು ವಲಯ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ರಫೀಕ್ ಮನಿಯ, ನೆರಿಮೊಗರು ವಲಯ ಯಂಗ್ ಬ್ರಿಗೇಡ್ ನ ಅಧ್ಯಕ್ಷ ಜಮಾಲ್, ಯಂಗ್ ಬ್ರಿಗೇಡ್ ಪ್ರದಾನ ಕಾರ್ಯದರ್ಶಿ ರಾಘವೇಂದ್ರ, ನೆರಿಮೊಗರು ವಲಯ ಸೇವಾದಳದ ಅಧ್ಯಕ್ಷ ಗಂಗಾಧರ ಶೆಟ್ಟಿ.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟಣೆಯ ನೆರಿಮೊಗರು ವಲಯ ಅಧ್ಯಕ್ಷ ರಫೀಕ್ ಪಿ ಕೆ,ಮಾಜಿ ಪಂಚಾಯತ್ ಸದಸ್ಯರಾದ ಶ್ರೀಮತಿ ಪೂಜಾ ವಸಂತ, ವಲಯ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಅಝೀಜ್ ನೆರಿಗೇರಿ, ಮಾಜಿ ಬೂತ್ ಅಧ್ಯಕ್ಷ ವೇಲೇರಿಯನ್ ತೋರಸ್,ಕಾಂಗ್ರೆಸ್ ಮುಖಂಡ ಮಹಮ್ಮದ್ ಕುಂಜಿ , ಶಶಿಧರ್ ಮುಕ್ವೆ, ತಾಹಿರ ಮನಿಯ, ಅಬ್ಬಾಸ್ ಕಂಡಿಗ, ಅಬ್ದುಲ್ ರಹೀಮ್, ವಸಂತ ಪನಂಬು, ಮಾಜಿ ಪಂಚಾಯತ್ ಸದಸ್ಯ ನಸೀರ್ ಸಾಹೇಬ್, ಹಮೀದ್ ಮನಿಯ, ಇಬ್ರಾಹಿಂ, ಕೊರಗಪ್ಪ ರೈ ಕೊಂಬೆಮಾರ್, ಶ್ರೀಮತಿ ಮೈಮುನ, ಶ್ರೀಮತಿ ಆಯಿಷಾ ಮನಿಯ, ಸೋಂಪ ಗೌಡ ಎಲಿಕ, ರವಿ ಮನಿಯ ಉಪಸ್ಥಿತರಿದ್ದರು.


























