ಬೆಳ್ತಂಗಡಿ: ಸೇವಾಭಾರತಿ ಇದರ ಸೇವಾಧಾಮದಲ್ಲಿ ಬೆನ್ನುಹುರಿ ಅಪಘಾತದ ಅರಿವು ಮೂಡಿಸುವ ಬಗ್ಗೆ ಮಾದರಿ ಸಾಂಸ್ಕೃತಿಕ ಮತ್ತು ಸನ್ಮಾನ ಕಾರ್ಯಕ್ರಮವು ಸೇವಾಧಾಮ ಪುನಶ್ಚೇತನ ಕೇಂದ್ರದಲ್ಲಿ ವಿಶ್ವ ಬೆನ್ನುಮೂಳೆ ಮುರಿತಕ್ಕೊಳಗಾದ ದಿನಾಚರಣೆಯಂದು ಸೆ.5 ರಂದು ನಡೆಸಿದರು.

ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸೇವಾಭಾರತಿಯ ಸಿಬ್ಬಂದಿಗಳಿಂದ ಮೈಮ್ ಶೋ ಮತ್ತು ಸನಿವಾಸಿಗಳಿಂದ ಗಾಲಿಕುರ್ಚಿಯ ಮೂಲಕ ನೃತ್ಯ, ಕಾರ್ಯದರ್ಶಿಯವರಿಂದ ದೇಶಭಕ್ತಿ ಗೀತೆ, ಸಿಬ್ಬಂದಿಗಳಿಂದ ದೇಶಭಕ್ತಿ ಗೀತೆಗಳನ್ನು ಹಾಡುವ ಮುಖಾಂತರ ಮಾದರಿ ಕಾರ್ಯಕ್ರಮಕ್ಕೆ ಪಾತ್ರವಾಯಿತು.
ಈ ಸಂದರ್ಭದಲ್ಲಿ ರೋಟರಿ ಆನ್ಸ್ ಕ್ಲಬ್ ಬೆಳ್ತಂಗಡಿಯ ಅಧ್ಯಕ್ಷರಾದ ನವೀನ ರವರು ರೂಪಾಯಿ 20,000/- ಚೆಕ್ಕನ್ನು ಸೇವಾಭಾರತಿಯ ಅಧ್ಯಕ್ಷರಿಗೆ ಹಸ್ತಾಂತರ ಮಾಡಿದರು. ಹಾಗೂ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಅರಸಿನಮಕ್ಕಿ ಸರಕಾರಿ ಪ್ರಾರ್ಥಮಿಕ ಶಾಲೆಯ ನಿವೃತ್ತ ಶಿಕ್ಷಕರಾದ ಜೋಸೆಫ್ ಪಿರೇರಾ ಮತ್ತು ಎಸ್. ಡಿ. ಎಮ್ ಕಾಲೇಜಿನ ಅಧ್ಯಪಕರಾದ ಡಾ. ಜಯಕುಮಾರ ಶೆಟ್ಟಿ ಹಾಗೂ ಧರ್ಮಸ್ಥಳ ಮಂಜುನಾಥೇಶ್ವರ ಶಾಲೆಯ ಕ್ರೀಡಾ ನಿವೃತ್ತ ಶಿಕ್ಷಕರಾದ ನರೇಂದ್ರ ಕುಮಾರ್ ಇವರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿತು.
ನಿವೃತ್ತ ಶಿಕ್ಷಕರಾದ ಜೋಸೆಫ್ ಪಿರೇರಾರವರು ಸೇವಾಧಾಮದವು ಅತ್ಯುತ್ತಮ ಸೇವಾಕಾರ್ಯಕ್ಕೆ ಶುಭಹಾರೈಸಿ ರೂಪಾಯಿ 10,000/- ಮೌಲ್ಯದ ಚೆಕ್ಕನ್ನು ಹಸ್ತಾಂತರ ಮಾಡಿದರು. ಡಾ. ಜಯಕುಮಾರ ಶೆಟ್ಟಿ ಇವರು ದಿವ್ಯಾಂಗರನ್ನು ಉದ್ದೇಶಿಸಿ ಸ್ಫೂರ್ತಿಧಾಯಕ ನುಡಿಗಳನ್ನಾಡಿದರು.
ಈ ಕಾರ್ಯಕ್ರಮದಲ್ಲಿ ರೋಟರಿ ಆನ್ಸ್ ಕ್ಲಬ್ ನ ಅಧ್ಯಕ್ಷರಾದ ಆನ್. ನವೀನ, ಡಾ.ಭಾರತೀ ಬೆನಕ ಹೆಲ್ತ್ ಸೆಂಟರ್ ಉಜಿರೆ, ಸೇವಾಭಾರತಿಯ ಸಲಹಾ ಸಮಿತಿ ಸದಸ್ಯರುಗಳಾದ ಡಾ. ಎ ಜಯಕುಮಾರ ಶೆಟ್ಟಿ ಮತ್ತು ಡಾ. ದೀಪಾಲಿ ಡೋಂಗ್ರೆ , ನಿವೃತ್ತ ಶಿಕ್ಷಕರುಗಳಾದ ಜೋಸೆಫ್ ಪಿರೇರಾ ಮತ್ತು ನರೇಂದ್ರ ಕುಮಾರ್, ಸೇವಾಭಾರತಿಯಅಧ್ಯಕ್ಷರು ಕೆ. ವಿನಾಯಕ ರಾವ್,ಕಾರ್ಯದರ್ಶಿ ಸ್ವರ್ಣ ಗೌರಿ, ಕೊಕ್ಕಡ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ಶ್ರೀಮತಿ ಪವಿತ್ರ ಗುರುರಾಜ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸೇವಾಭಾರತಿಯ ಫಂಡ್ ರೈಸಿಂಗ್ ಮ್ಯಾನೇಜರ್ ಚರಣ್ ಕುಮಾರ್.ಎಮ್ ರವರು ಸ್ವಾಗತಿಸಿದರು. ಮತ್ತು ಕ್ಷೇತ್ರ ಸಂಯೋಜಕರಾದ ಅಶ್ರಿತ್ ಸಿ.ಪಿ ಇವರು ನಿರೂಪಿಸಿದರು. ಮ್ಯಾನೇಜರ್ ಮೋಹನ್. ಎಸ್ ಧನ್ಯವಾದ ವಿತ್ತರು. ಕಾರ್ಯಕ್ರಮದಲ್ಲಿ ಸನಿವಾಸಿಗಳು ಅವರ ಪೋಷಕರು ಮತ್ತು ಕಾರ್ಯಕರ್ತರು ಹಾಗೂ ಸೇವಾಭಾರತಿಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.


























