ಪುತ್ತೂರು: ಜೇಸಿಐ ಪುತ್ತೂರು ಇದರ ಜೇಸಿ 2021ನೇ ಸಾಲಿನ ‘ಜೇಸಿ ಸಪ್ತಾಹ’ ಉದ್ಘಾಟನೆಯು ಸೆ.9 ರಂದು ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರೋಟರಿ ಕ್ಲಬ್ ಮಾಜಿ ಗವರ್ನರ್ ಡಾ.ಭಾಸ್ಕರ್ ಕೊರೋನಾ ನಿಯಂತ್ರಿಸುವಲ್ಲಿ ಆರೋಗ್ಯ ಇಲಾಖೆಯೊಂದಿಗೆ ಜೇಸಿಐ, ರೋಟರಿ ಮೊದಲಾದ ಸ್ವಯಂ ಸೇವಾ ಸಂಸ್ಥೆಗಳು ಪೂರಕವಾಗಿ ಜಗತ್ತಿನಾದ್ಯಂತ ಸೇವೆ ಸಲ್ಲಿಸುತ್ತಿದೆ. ಈ ವರ್ಷದ ಜೇಸಿ ಸಪ್ತಾಹವನ್ನು ಕೋವಿ ಹೆಲ್ಪ್ ಎಂಬ ಹೊಸ ಕಲ್ಪನೆಯೊಂದಿಗೆ ಸರಕಾರ ನಿಯಮದಂತೆ ನಡೆಸಲಾಗುತ್ತಿದ್ದು ಸಪ್ತಾಹ ಉತ್ತಮ ರೀತಿಯಲ್ಲಿ ನಡೆಯಲಿ ಎಂದು ಆಶಿಸಿದರು.

ವಲಯ 15 ರ ನಿರ್ದೇಶಕ ಪಶುಪತಿ ಶರ್ಮ ಮಾತನಾಡಿ, ತರಬೇತಿಯೇ ಜೀವಾಳ ಎಂಬ ನೆಲೆಯಲ್ಲಿ ಜೇಸಿಐ ಕಾರ್ಯನಿರ್ವಹಿಸುತ್ತಿದ್ದು ಯುವ ಸಮೂಹದ ವೈಯಕ್ತಿಕ ಬೆಳವಣಿಗೆಗೆ ಪೂರಕವಾದ ಉತ್ತಮ ತರಬೇತಿ ನೀಡಿ ಅವರನ್ನು ಸಮಾಜದಲ್ಲಿ ಬೆಳೆಸುವ ಸಂಸ್ಥೆಯಾಗಿ ಮೂಡಿಬರುತ್ತಿದೆ ಎಂದರು.

ಪುರಸಭಾ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು ಮಾತನಾಡಿ, ಜೇಸಿಐಯು ಸಮಾಜದಲ್ಲಿ ಉತ್ತಮ ಕೆಲಸಗಳನ್ನು ಮಾಡುತ್ತಿದೆ. ಇನ್ನೊಬ್ಬರ ಕಷ್ಟಗಳನ್ನು ನಮ್ಮ ಕಷ್ಟ ಎಂಬ ಭಾವನೆಯೊಂದ ಸೇವೆ ಸಲ್ಲಿಸಿದಾಗ ಯಶಸ್ಸು ಖಂಡಿತಾ ಸಾಧ್ಯ ಎಂದರು. ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಆಶಾ ಪುತ್ತೂರಾಯ ಮಾತನಾಡಿ, ಸಂಪೂರ್ಣ ಅರಿವು ಕಾರ್ಯಕ್ರಮದ ಮೂಲಕ ಮುಂಜಾಗ್ರತ ಕ್ರಮಗಳ ಪಾಲನೆಯೊಂದಿಗೆ ಲಸಿಕೆ ಪಡೆದುಕೊಳ್ಳಲು ಬಾಕಿಯಿರುವವರು ಪಡೆಯಲು ಅನುಕೂಲವಾಗಲಿ ಎಂದರು.

ಜೆಸಿರೆಟ್ ಅಧ್ಯಕ್ಷೆ ಶಿಲ್ಪಾ ಪುರುಷೋತ್ತಮ ರೈ, ಗೌತಮ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜೆಸಿಐ ಅಧ್ಯಕ್ಷೆ ಸ್ವಾತಿ ಜೆ.ರೈ ಸ್ವಾಗತಿಸಿದರು. ಕಾರ್ಯದರ್ಶಿ ತಿಲಕ್ ರಾಜ್ ವಂದಿಸಿದರು. ಮಾಜಿ ಅಧ್ಯಕ್ಷ ಜಗನ್ನಾಥ ರೈ, ಸನತ್, ಪ್ರಮೀತಾ ಸಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.


























