ಪುತ್ತೂರು: ವಿದ್ಯಾಮಾತ ಅಕಾಡೆಮಿಯಿಂದ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಲಿಖಿತ ಪರೀಕ್ಷೆಯ ತರಬೇತಿ ಸೆ.15 ರಂದು ಎಪಿಯಂಸಿ ರಸ್ತೆಯ ಅಕ್ಷಯ ಕಾಂಪ್ಲೆಕ್ಸ್ ನಲ್ಲಿ ಪ್ರಾರಂಭಗೊಂಡಿತು.
ವಿದ್ಯಾಮಾತ ಅಕಾಡೆಮಿ ಅಧ್ಯಕ್ಷ ಭಾಗ್ಯೇಶ್ ರೈ ಮಾತನಾಡಿ, ಬೆಳ್ಳಾರೆ ಠಾಣೆಯ ಎಸ್.ಐ. ಆಂಜನೇಯ ರೆಡ್ಡಿ ಇವರ ವಿಶೇಷ ಮುತುರ್ವಜಿಯಲ್ಲಿ ಲಿಖಿತ ಪರೀಕ್ಷೆಯ ತರಬೇತಿ ಪ್ರಾರಂಭಗೊಂಡಿದೆ. ಪಿ.ಎಸ್.ಐ ದೈಹಿಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಕೊಡುವುದಾಗಿಯೂ ವಿದ್ಯಾಮಾತ ಅಕಾಡೆಮಿ ಈ ಹಿಂದೆಯೇ ಘೋಷಣೆ ಮಾಡಿತ್ತು.
ಇದಕ್ಕೆ ಪೂರಕವಾಗಿ ಆಂಜನೇಯ ರೆಡ್ಡಿಯವರು ಮಾದರಿ ಪ್ರಶ್ನೆ ಪತ್ರಿಕೆ ತಯಾರಿಸಿ ಪರೀಕ್ಷೆಯನ್ನು ಆರಂಭಿಸಿ 15 ಸಾವಿರ ಬಹುಮಾನವನ್ನು ಕೂಡ ತನ್ನ ವೈಯಕ್ತಿಕ ನೆಲೆಯಲ್ಲಿ ಘೋಷಣೆ ಮಾಡಿದ್ದಾರೆ. ಇವೆಲ್ಲವೂ ಪುತ್ತೂರಿನ ಮಟ್ಟಿಗೆ ಬಹು ದೊಡ್ಡ ವಿಚಾರ ಹಾಗೂ ಹಿಂದೆಲ್ಲಾ ತರಬೇತಿಗಾಗಿ ದೊಡ್ಡ, ದೊಡ್ಡ ನಗರಗಳಿಗೆ ಅಲೆದಾಡಬೇಕಿತ್ತು ಎಂದರು. ಇಂಥ ಅತ್ಯುತ್ತಮವಾದ ಕಾರ್ಯಕ್ರಮ ನೇರವೆರಿಸಲು ಕಾರಣಕರ್ತರಾದ ಆಂಜನೇಯ ರೆಡ್ಡಿ ಇವರಿಗೆ ಸಂಸ್ಥೆಯ ಪರವಾಗಿ ತುಂಬಾ ತುಂಬಾ ಧನ್ಯವಾದಗಳು ಎಂದು ಅವರು ಹೇಳಿದರು.
ಸಬ್ ಇನ್ಸ್ಪೇಕ್ಟರ್ ಆಂಜನೇಯ ರೆಡ್ಡಿ ,ಚಂದ್ರಶೆಖರ್ ರಾವ್, ಚಂದ್ರಕಾಂತ್, ಹರ್ಷಿತಾ ಆಚಾರ್ಯ, ವಿಜೇತಾ, ಚೈತ್ರಾ ದೀಕ್ಷಿತ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.