ಉಪ್ಪಿನಂಗಡಿ: ರಿಪೇರಿ ಮಾಡಲು ಕೊಟ್ಟ ಆಭರಣವನ್ನು ವಾಪಸ್ ನೀಡದೆ ವಂಚನೆ ಮಾಡಿದ ಘಟನೆ ಉಪ್ಪಿನಂಗಡಿಯ ಸ್ವರ್ಣ ಜ್ಯುವೆಲ್ಲರಿಯಲ್ಲಿ ನಡೆದಿದೆ.
ಬಾರ್ಯ ಗ್ರಾಮದ ಮಹಿಳೆಯೊಬ್ಬರು ಸ್ವರ್ಣ ಆಭರಣ ಮಳಿಗೆಯ ಮಾಲಕನ ವಿರುದ್ದ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ. ದುರಸ್ಥಿಗೆ ನೀಡಿದ ಆಭರಣಗಳನ್ನು ಮರು ಹಿಂದಿರುಗಿಸಲು ನಿರಾಕರಣೆ ಮಾಡಿರುವುದರ ಬಗ್ಗೆ ದೂರು ದಾಖಲಾಗಿದೆ.
ಮಹಿಳೆಯ ತವರು ಮನೆಯವರು ಸುಮಾರು ಏಳು ವರ್ಷದ ಹಿಂದೆ ಸ್ವರ್ಣ ಅಂಗಡಿಯಿಂದ ಆಭರಣವನ್ನು ಖರೀದಿಸಿದ್ದರು. ಆ ಸಮಯದಲ್ಲಿ ತವರು ಮನೆಯವರು ಹಣವನ್ನು ಪಾವತಿ ಮಾಡಿರುತ್ತಾರೆ. ನನಗೂ ಆಭರಣದ ಅಂಗಡಿಯವರಿಗೂ ಇಲ್ಲಿಯವರೆಗೂ ಯಾವುದೇ ವ್ಯವಹಾರಗಳಿರುವುದಿಲ್ಲ. ಸೆ. 08 ರಂದು ಮಹಿಳೆ ತನ್ನ ತವರು ಮನೆಗೆ ಕಾರ್ಯಕ್ರಮದ ನಿಮಿತ್ತ ಆಗಮಿಸಿದ್ದು, ಆ ಸಮಯದಲ್ಲಿ ತನ್ನ ಮಗು ಆಕಸ್ಮಿಕವಾಗಿ ಮಹಿಳೆ ಧರಿಸಿರುವ ಬಳೆಯನ್ನು ತುಂಡರಿಸಿದ್ದೂ, ಆ ಪ್ರಯುಕ್ತ ದುರಸ್ತಿಗಾಗಿ ಸೆ.09 ರಂದು ಆಭರಣವನ್ನು ದುರಸ್ಥಿ ಪಡಿಸಲು ಉಪ್ಪಿನಂಗಡಿಯ ಸ್ವರ್ಣ ಆಭರಣದ ಅಂಗಡಿಯಲ್ಲಿ ನೀಡಿದ್ದರು.
ತದನಂತರ ಸೆ.13 ರಂದು ದುರಸ್ತಿ ಪಡಿಸಿದ ಆಭರಣವನ್ನು ಹಿಂಪಡೆಯಲು ಮಹಿಳೆ ತೆರಳಿದ್ದರು. ಆ ಸಂದರ್ಭದಲ್ಲಿ ಬೆಳಗಿನಿಂದ ಸಂಜೆಯ ವರೆಗೆ ಆಭರಣ ನೀಡುತ್ತೇನೆ ಎಂದು ಆಭರಣ ಅಂಗಡಿಯ ಮಾಲಕ ಸತಾಯಿಸಿದ್ದ ಎನ್ನಲಾಗಿದೆ. ಸಂಜೆ ನಿಮ್ಮ ಆಭರಣವನ್ನು ಕೊಡಲು ಆಗುವುದಿಲ್ಲ, ನಿನ್ನ ಅಣ್ಣ ನನಗೆ ಹಣ ಕೊಡಬೇಕು ಎಂದು ಅಂಗಡಿ ಮಾಲಿಕ ವಿಚಿತ್ರವಾಗಿ ಹೇಳಿದ್ದಾರೆ ಎನ್ನಲಾಗಿದೆ. ಆಭರಣವನ್ನು ಕೊಡುವುದಿಲ್ಲ ಎಂದು ಗದರಿಸಿದ್ದಾರೆ ಆ ಬಗ್ಗೆ ನನಗೆ ಏನೂ ತಿಳಿದಿಲ್ಲ . ಅದನ್ನು ಕೇಳಿ ಹೆದರಿದ ನಾನು ಮನೆಗೆ ಹಿಂದಿರುಗಿದೆನು, ಇವತ್ತು ನಾನು ನನ್ನ ವಯಸ್ಸಾದ ತಾಯಿಯನ್ನು ಕರೆದುಕೊಂಡು ಸ್ವರ್ಣ ಆಭರಣದ ಅಂಗಡಿಗೆ ತೆರಳಿದೆವು ಈ ಸಂದರ್ಭದಲ್ಲೂ ಅವರು ಆದೇ ಉತ್ತರವನ್ನು ನೀಡಿರುತ್ತಾರೆ, ನನಗೆ ನನ್ನ ಅಣ್ಣನ ವ್ಯವಹಾರದ ಬಗ್ಗೆ ಏನೂ ತಿಳಿದಿರುವುದಿಲ್ಲ. ನಾನು ಮದುವೆಯಾಗಿ ನನ್ನ ಗಂಡನ ಮನೆಯವರ ಜೊತೆ ನೆಮ್ಮದಿಯಿಂದ ಜೀವನ ನಡೆಸಿದ್ದೂ ಇದೀಗ ಈ ಸಮಸ್ಯೆ ನನ್ನನ್ನು ನನ್ನ ಗಂಡನ ಮನೆಗೆ ತೆರಳದಂತೆ ತಡೆಯಾಗಿರುತ್ತದೆ ಎಂದು ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.