ಕಡಬ: ತಾಲೂಕಿನ ಉದನೆಯ ತೂಗುಸೇತುವೆ ಬಳಿ ಪುರುಷರ 1 ಜೊತೆ ಚಪ್ಪಲ್ ಹಾಗೂ ಬ್ಯಾಗ್ ಪತ್ತೆಯಾಗಿದ್ದು, ತೂಗು ಸೇತುವೆಯಿಂದ ನದಿಗೆ ಯಾರೋ ಗಂಡಸು ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಬ್ಯಾಗ್ ನಲ್ಲಿ ಗುರುತು ಚೀಟಿ ಪತ್ತೆಯಾಗಿದ್ದು ಪುಟ್ಟಪರ್ತಿ ನಿವಾಸಿ ಎಂದು ಹೇಳಲಾಗಿದೆ. ಅಲ್ಲದೇ ಡೆತ್ ನೋಟ್ ಹಾಗೂ ಧರ್ಮಸ್ಥಳದಿಂದ ಉದನೆಗೆ ಮಾಡಲಾಗಿದ್ದ ಬಸ್ ಟಿಕೆಟ್ ಸಹ ಬ್ಯಾಗ್ ನಲ್ಲಿ ಪತ್ತೆಯಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.