ಪುತ್ತೂರು: ಬ್ಲಾಕ್ ಮಹಿಳಾ ಕಾಂಗ್ರೆಸ್ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಶಾರದಾ ಅರಸ್‌ರವರ ಪದಗ್ರಹಣ ಕಾರ್ಯಕ್ರಮವು ಸೆ.18 ರಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು.
ಇದೇ ವೇಳೆ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ವಿಶಾಲಾಕ್ಷಿ ಇವರಿಗೆ ಸನ್ಮಾನ ಕಾರ್ಯಕ್ರಮವು ನಡೆಯಿತು.ಮಾಜಿ ಅಧ್ಯಕ್ಷೆ ವಿಶಾಲಾಕ್ಷಿ ಇವರು ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಶಾಲೆಟ್ ಪಿಂಟೋ ಹಾಗೂ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ನೇತೃತ್ವದಲ್ಲಿ ಅಧಿಕಾರವನ್ನು ಶಾರದಾ ಅರಸ್ ಅವರಿಗೆ ಹಸ್ತಾಂತರಿಸಲಾಯಿತು.
ನೂತನ ಉಪಾಧ್ಯಕ್ಷರುಗಳಾಗಿ ಚಂದ್ರಕಲಾ, ಯೋಗಿನಿ ರೈ, ಭವಾನಿ ಹುಕ್ರಪ್ಪ ಗೌಡ,ಫೌಝಿಯಾ ಇಬ್ರಾಹಿಂ, ವನಿತಾ ಆಚಾರ್ಯ ಹಾಗೂ ಸಿಂಥಿಯ ಡಿ’ಸೋಜಾ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಸೀತಾ ಭಟ್ ಮತ್ತು ಕಾರ್ಯದರ್ಶಿಗಳಾಗಿ ಬಿ.ಸಿ.ಚಿತ್ರಾ,ಸರೋಜಿನಿ ಮೋನಪ್ಪ ಪೂಜಾರಿ,ನೆಬಿಸ ಮತ್ತು ಸಹಕಾರ್ಯದರ್ಶಿಯಾಗಿ ಪೂಜಾ ವಸಂತ್,ಸುಜಾತ ರೈ, ವಿಮಲಾ ನಾಯಕ್, ಜೆಸಿಂತಾ ಗೋನ್ಸಾಲಿಸ್ ಮತ್ತು ಖಜಾOಚಿಯಾಗಿ ಶುಭ ಮಾಲಿನಿ ಮಲ್ಲಿ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಎಲ್ಲಾ ಪದಾಧಿಕಾರಿಗಳು, ಜಿಲ್ಲಾ ಮಹಿಳಾ ಘಟಕದ ಸದಸ್ಯರು, ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.