ಮಂಗಳೂರು: ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸೆ.18 ರಂದು ಅಖಿಲ ಭಾರತ ಹಿಂದೂ ಮಹಾಸಭಾದ ಹೆಸರಿನಲ್ಲಿ ಜರಗಿದ ಪತ್ರಿಕಾಗೋಷ್ಠಿಗೆ ಸ್ವಾತಂತ್ರ್ಯ ಪೂರ್ವದ ಲಾಲಾ ಲಜಪತ್ ರಾಯ್, ಮದನ್ ಮೋಹನ್ ಮಾಳವೀಯ, ಸ್ವಾತಂತ್ರ್ಯ ವೀರ ಸೇನಾನಿ ವೀರ ಸಾವರ್ಕರ್ ಮುಂತಾದ ಮಹನೀಯರು ನೇತೃತ್ವದಲ್ಲಿ ಮುನ್ನಡೆಸಿದ ಹಿಂದೂ ಮಹಾಸಭಾಕ್ಕೂ ಪತ್ರಿಕಾಗೋಷ್ಠಿ ನಡೆಸಿದ ವ್ಯಕ್ತಿಗಳಿಗೂ ಯಾವುದೇ ಸಂಬಂಧ ಇಲ್ಲ ಹಾಗೂ ಈ ವ್ಯಕ್ತಿಗಳು ಅಖಿಲ ಭಾರತ ಹಿಂದೂ ಮಹಾಸಭಾದ ರಾಷ್ಟ್ರೀಯ ಪಕ್ಷದ ಕರ್ನಾಟಕ ರಾಜ್ಯ ಘಟಕದಿಂದ ಉಚ್ಚಾಟನೆಗೊಂಡರಾಗಿ ರುತ್ತಾರೆ ಎಂದು ರಾಜ್ಯಧ್ಯಕ್ಷ ಡಾ. ಎಲ್. ಕೆ ಸುವರ್ಣ ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ನಕಲಿಯಾಗಿ, ಪೋರ್ಜರಿಯಾಗಿ ಪತ್ರಿಕಾಗೋಷ್ಠಿಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿಲು ಕುಮ್ಮಕ್ಕು ನೀಡುವ ಹಿಂದೂ ಮಹಾಸಭಾದ ಸ್ವಯಂಘೋಷಿತ ನಾಯಕ ರಾಜೇಶ್ ಪವಿತ್ರನ್ ಬರ್ಕೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಹನಿಟ್ರ್ಯಾಪ್ ಪ್ರಕರಣದಲ್ಲಿ FIR ಆಗಿರುತ್ತದೆ. ಆದ್ದರಿಂದ ಈತ ತಪ್ಪಿತಸ್ಥ ಎಂದು ತನಿಖೆ ನಡೆಸಿ ಅಮಾನತು ಮಾಡಿರುತ್ತೇವೆ. ಪತ್ರಿಕಾಗೋಷ್ಠಿಯಲ್ಲಿ ಇದ್ದ ಧರ್ಮೇಂದ್ರ ಮಂಗಳೂರು ಎಂಬವನನ್ನು ರಾಷ್ಟ್ರೀಯ ನಾಯಕರ ಜೊತೆ ಅಶಿಸ್ತಿನಿಂದನಿಂದ ವರ್ತಿಸಿದ ಹಾಗೂ ಸ್ವಯಂಘೋಷಿತ ರಾಜ್ಯಾಧ್ಯಕ್ಷನೆಂದು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡುತ್ತಿದ್ದುದನ್ನು ಪಕ್ಷ ಗಂಭೀರವಾಗಿ ಪರಿಗಣಿಸಿ ರಾಷ್ಟ್ರೀಯ ನಾಯಕರ ಆದೇಶದ ಮೇರೆಗೆ ಅಮಾನತು ಮಾಡಿರುತ್ತೇವೆ.
ಈಗ ಸ್ವಯಂಘೋಷಿತ ಅಧ್ಯಕ್ಷನೆಂದು ಹೇಳಿಕೊಳ್ಳುವ ರಾಜೇಶ್ ಪವಿತ್ರ, ಧರ್ಮೇಂದ್ರ, ಪ್ರೇಮ್ ಪೊಳಲಿ, ಸಂದೀಪ್ ಶೆಟ್ಟಿ ಅಡ್ಕ, ಕಮಲಾಕ್ಷ ಹಾಗೂ ಈ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದವರಿಗೂ ನಮಗೂ ಯಾವುದೇ ಸಂಬಂಧ ಇರುವುದಿಲ್ಲ ನಮ್ಮ ಸದಸ್ಯತ್ವವನ್ನು ಪಡೆದಿರುವುದಿಲ್ಲ ಆದ್ದರಿಂದ ಹಿಂದೂ ಮಹಾಸಭಾದ ಹೆಸರು ದುರ್ಬಳಕೆ ಮಾಡಿ ಬಳಕೆಮಾಡಿ ಐಷಾರಾಮಿ ಹೋಟೆಲ್ ಗಳಲ್ಲಿ ಸಭೆ ನಡೆಸಿ ಅನ್ಯ ಧರ್ಮಿಯರಲ್ಲಿ ಬಿಲ್ಲು ಪಾವತಿಸಿ, ಜಿಲ್ಲೆ ಯಲ್ಲಿ, ರಾಜ್ಯದಲ್ಲಿ ಸಾಮರಸ್ಯ ಕೆಡಿಸುವ ಕೆಲಸ ಮಾಡುತ್ತಿದ್ದಾರೆ.ಈ ಸಂಬಂಧ ನಾವು ಮಂಗಳೂರಿನ ಸುರತ್ಕಲ್ ಪೊಲೀಸ್ ಠಾಣೆಗೆ ಭೇಟಿ ನೀಡಿ ರಾಜೇಶ್ ಪವಿತ್ರನ್ ಉಚ್ಚಾಟನೆಯಾಗಿರುವ ಹಾಗೂ ನಮ್ಮ ಪಕ್ಷದ ಬೈಲಾವನ್ನು ನೀಡಿ ಈ ವ್ಯಕ್ತಿಹಾಗೂ ಮೇಲೆ ತಿಳಿಸಿರುವ ವ್ಯಕ್ತಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ತಿಳಿಸಿರುತ್ತೇವೆ.
ಅದರ ಪ್ರಕಾರ 17,9,2021 ರಂದು ಆತನನ್ನು ಪೊಲೀಸ್ ಠಾಣೆಗೆ ಠಾಣಾಧಿಕಾರಿಗಳು ಹಾಜರಾಗಲು ತಿಳಿಸಿದ್ದರು. ಕೆಲವು ಕಾರಣಗಳನ್ನು ನೀಡಿ ನಾಪತ್ತೆಯಾಗಿದ್ದಾನೆ ಆದುದರಿಂದ ಉನ್ನತ ಪೊಲೀಸ್ ಅಧಿಕಾರಿಯನ್ನು ಭೇಟಿಯಾಗಿ ಎಲ್ಲಾ ದಾಖಲೆಗಳನ್ನು ನೀಡಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದೇವೆ.ಅದರ ನಡುವೆ ಇಂದು ಪತ್ರಿಕಾಗೋಷ್ಠಿಯನ್ನು ಕರೆದು ಜಿಲ್ಲೆಯಲ್ಲಿ ಅಶಾಂತಿ ನಿರ್ಮಾಣವಾಗುವಂತೆ ವಿವಾದಾತ್ಮಕ ಹೇಳಿಕೆಯನ್ನು ನೀಡಿರುವುದರಿಂದ ಹಿಂದೂ ಮಹಾಸಭಾಕ್ಕೂ ಅವಮಾನವಾಗಿರುವುದರಿಂದ ಕೂಡಲೇ ಮೇಲೆ ತಿಳಿಸಿರುವ ವ್ಯಕ್ತಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ಬರ್ಕೆ ಪೊಲೀಸ್ ಠಾಣೆಯಲ್ಲಿ ನೀಡಿ ಎಫ್ ಐ ಆರ್ ದಾಖಲಿಸಿ ಕಾನೂನು ರೀತಿಯ ಶಿಕ್ಷೆ ವಿಧಿಸಿ ಜೈಲಿಗಟ್ಟಬೇಕು ಎಂದು ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯ ಸಮಿತಿಯ ಪರವಾಗಿ ದೂರು ನೀಡಲಾಗಿದೆ ಎಂದು ಅಖಿಲ ಭಾರತ ಹಿಂದೂ ಮಹಾ ಸಭಾ ಕರ್ನಾಟಕ ರಾಜ್ಯಧ್ಯಕ್ಷ ಡಾ. ಎಲ್. ಕೆ ಸುವರ್ಣ ತಿಳಿಸಿದ್ದಾರೆ.