ಮಂಗಳೂರು: ಒಂದೇ ಮತ ಒಂದೇ ದೇವರು ಎಂದು ಸಾರಿದ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿಗಳ ತತ್ವ ಆದರ್ಶದ ಮೂಲಕ ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬ ಸೇವಾ ಮಂತ್ರದ ಮೂಲಕ ನಿರಂತರ ಸಮಾಜ ಸೇವೆಯಲ್ಲಿ ತೊಡಗಿರುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿರುವೆರ್ ಕುಡ್ಲ ಸಂಘಟನೆಯ ಬಿರುವೆರ್ ಕುಡ್ಲ ಬೆದ್ರ ಘಟಕದ ಮಹಾ ಸಭೆ ಸೆ.19 ರಂದು ಮೂಡಬಿದ್ರೆ ಬಲ್ಲಾಳ್ ರೆಸಿಡೆನ್ಸಿ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.
ಮಹಾ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಬಿರುವೆರ್ ಕುಡ್ಲ ಸಂಘಟನೆಯ ಬೆದ್ರ ಘಟಕದ ಅಧ್ಯಕ್ಷರನ್ನಾಗಿ ಚಂದ್ರಶೇಖರ್ (ಮುನ್ನ )ಮಜಿಲ ಮನೆ, ಬೆದ್ರ. ಉಪಾಧ್ಯಕ್ಷರುಗಳು: ಸನತ್ ಕುಮಾರ್ ಬೆದ್ರ, ತೇಜು ಕೋಟ್ಯಾನ್ ಒಂಟಿಕಟ್ಟೆ, ಗಣೇಶ್ ಕೋಟ್ಯಾನ್ ಸಂಪಿಗೆ ಹಾಗೂ ರಾಜ್ ಪವಿ ಬಿಲ್ಲವ. ಇವರುಗಳನ್ನು ಗೌರವ ಸಲಹೆಗಾರರು ಮತ್ತು ಕೇಂದ್ರ ಸಮಿತಿಯ ಪದಾಧಿಕಾರಿಗಳ ಸಹಮತದಲ್ಲಿ ಸರ್ವಾನುಮತದಿಂದ ಆಯ್ಕೆಮಾಡಲಾಗಿದೆ.