(ಜ. 25)ಪುತ್ತೂರಿನ ಕೆಮ್ಮಿಂಜೆ ಮೊಟ್ಟೆತ್ತಡ್ಕದ ಶ್ರೀ ಕ್ಷೇತ್ರ ಮಣ್ಣಾಪುವಿನಲ್ಲಿ ಶ್ರೀ ಕೊರಗಜ್ಜ ದೈವಸ್ಥಾನದ ಜೀರ್ಣೋದ್ಧಾರ ಹಾಗೂ ಮೂಲ ಶಿಲಾ ಪುನರ್ ಪ್ರತಿಷ್ಠೆ ಮತ್ತು ನೇಮೋತ್ಸವವು ಜ. 25ರಂದು ನಡೆಯಲಿದೆ.
ಸರಿಸುಮಾರು 300 ವರ್ಷಗಳ ಹಿಂದೆ ಪುತ್ತೂರು ತಾಲೂಕಿನ ಕೆಮ್ಮಿಂಜೆ ಗ್ರಾಮದ ಮಣ್ಣಾಪು ಎಂಬಲ್ಲಿ ಶ್ರೀ ಲಕ್ಷ್ಮೀ ದೇವರನ್ನು ಆರಾಧಿಸಿಕೊಂಡು ಬರುತ್ತಿದ್ಧ ತಂತ್ರಿತ್ತಾಯರ ಮನೆತನವೊಂದಿತ್ತು. ದಿನ ಕಳೆಯುತ್ತಿದ್ದಂತೆ ಮನೆಯಲ್ಲಿ ಜೋಪಾನವಾಗಿ ಕಾಯ್ದುಕೊಂಡಿದ್ದ ದನಕರುಗಳು ಮಾಯವಾಗಿದ್ದನ್ನು ಕಂಡು, ಮನೆ ಯಜಮಾನ ಅಜ್ಜನ ಬಳಿ ತನ್ನ ರೋಧನೆಯನ್ನು ಪ್ರಾರ್ಥಿಸಿದಾಗ ದನಕರುಗಳು ಮರಳಿ ಸಿಕ್ಕಿದ್ದು, ಮುಂದೆ ಇಲ್ಲಿ ಅಜ್ಜನನ್ನು ಆರಾಧಿಸಿಕೊಂಡು ನಂಬಿಕೊಂಡು ಬರಲಾಯಿತು. ದೈವದ ಕಟ್ಟೆ ನಿರ್ಮಾಣ ಆಗಿತ್ತಾದರೂ ಇದೀಗ ಮತ್ತೆ ಅಜ್ಜನ ಕಟ್ಟೆಯನ್ನು ನವೀಕೃತಗೊಳಿಸುವ ವಿಚಾರ ಪ್ರಶ್ನಾ ಚಿಂತನೆಯಲ್ಲಿ ಮೂಡಿಬಂದಿದ್ದು, ಈ ನಿಮಿತ್ತ ಶ್ರೀ ಕೊರಗಜ್ಜ ದೈವದ ಮೂಲ ಶಿಲಾ ಪುನರ್ ಪ್ರತಿಷ್ಠಾ ಕಾರ್ಯಕ್ರಮ ಹಾಗೂ ನೇಮೋತ್ಸವವು ಜ. 25 ರಂದು ನಡೆಯಲಿದೆ.
ಸಭಾ ಕಾರ್ಯಕ್ರಮದಲ್ಲಿ ಶಾಸಕ ಸಂಜೀವ ಮಠಂದೂರು ದೀಪ ಬೆಳಗಿಸಲಿದ್ದು, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾದ ಎನ್ ರವೀಂದ್ರ ಶೆಟ್ಟಿ ನುಳಿಯಾಲು ಅಧ್ಯಕ್ಷತೆ ವಹಿಸಲಿದ್ದಾರೆ. ಎಪಿಎಂಸಿ ನಿರ್ದೇಶಕರಾದ ಬೂಡಿಯಾರು ರಾಧಾಕೃಷ್ಣ ರೈ, ಅಕ್ಷಯ ಫಾರ್ಮ್ ನ ಜಯಂತ ನಡುಬೈಲು, ನಗರಸಭೆ ಪುತ್ತೂರಿನ ಸದಸ್ಯೆ ಶೈಲಾ ಪೈ, ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಮೊಟ್ಟೆತ್ತಡ್ಕದ ಆಡಳಿತ ಮೊಕ್ತೇಸರರಾದ ಮೋಹನ್ ರೈ ಮಿಷನ್ ಮೂಲೆ, ಉಪೇಂದ್ರ ಬಲ್ಯಾಯ ದೇವಸ್ಯ,ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಮೊಟ್ಟೆತ್ತಡ್ಕದ ಅಧ್ಯಕ್ಷ ವೇಣುಗೋಪಾಲ ಗೌಡ ಗೌರವ ಉಪಸ್ಥಿತರಿದ್ದು ವೇದಮೂರ್ತಿ ಸುಬ್ರಹ್ಮಣ್ಯ ಬಳ್ಳಕ್ಕುರಾಯ ಧಾರ್ಮಿಕ ಭಾಷಣ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಗೌರವಾಧ್ಯಕ್ಷ ಸುಧಾಕರ್ ರೈ ಮೊಟ್ಟೆತ್ತಡ್ಕ, ಅಧ್ಯಕ್ಷ ವಿಶ್ವನಾಥ ಆರ್ ಕೆಮ್ಮಿಂಜೆ, ಕಾರ್ಯದರ್ಶಿ ಉಮೇಶ್ ಮಣ್ಣಾಪು,, ಉಪಾಧ್ಯಕ್ಷ ಕೇಶವ ಮಣ್ಣಾಪು, ಖಜಾಂಚಿ ಅಂಗಾರ ಕೆಮ್ಮಿಂಜೆ, ಮಧ್ಯಸ್ಥರಾದ ಗಣೇಶ್ ಪೂಜಾರಿ ಕೆಮ್ಮಿಂಜೆ, ದೈವದ ಪ್ರಧಾನ ಅರ್ಚಕರಾದ ಕುಂಡ ಮಣ್ಣಾಪು, ಅಣ್ಣು ಮಣ್ಣಾಪು, ಗುರುವ ಬದಿಯಡ್ಕ, ಗೌರವ ಸಲಹೆಗಾರರಾದ ಗಂಗಾಧರ ಮಣ್ಣಾಪು, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಎನ್ ರವೀಂದ್ರ ಶೆಟ್ಟಿ ನುಳಿಯಾಲು, ಅಧ್ಯಕ್ಷರಾದ ವಿಶ್ವನಾಥ್ ಮಣ್ಣಾಪು, ಉಪಾಧ್ಯಕ್ಷ ವಿಶ್ವನಾಥ್ ಪೂಜಾರಿ, ಕಾರ್ಯದರ್ಶಿ ದಿನೇಶ್ ಎಮ್ ಕೆಮ್ಮಿಂಜೆ, ಸಹ ಕಾರ್ಯದರ್ಶಿ ವಿಶ್ವನಾಥ ನಾಯ್ಕ ಅಮ್ಮುಂಜ, ಗೌರವ ಸಲಹೆಗಾರರಾದ ರಮೇಶ್ ರೈ ನೆಲ್ಲಿಕಟ್ಟೆ, ಖಜಾಂಚಿ ಯಶವಂತ ಪೇರಾಜೆ ಸೇರಿ ಹಲವರು ಉಪಸ್ಥಿತರಿರಲಿದ್ದಾರೆ.