ಪುತ್ತೂರು: ಡೀಸೆಲ್ ಬೆಲೆ ಏರಿಕೆಯಿಂದ ಕೆಂಪು ಕಲ್ಲಿನ ದರ ಏರಿಕೆ ಮಾಡುವುದು ಅನಿವಾರ್ಯವಾಗಿದೆ. ಡೀಸೆಲ್ ಬೆಲೆ ಹಾಗೂ ಲಾರಿ ಬಿಡಿಭಾಗಗಳ ಬೆಲೆ ಏರಿಕೆಯಾಗಿರುವುದರಿಂದ ಕೆಂಪು ಕಲ್ಲಿನ ದರವು ಹೆಚ್ಚಳವಾಗಿರುತ್ತದೆ ದಯವಿಟ್ಟು ಗ್ರಾಹಕರು ಸಹಕರಿಸಿ ಎಂದು ಜೈ ಭಾರತ್ ಲಾರಿ ಚಾಲಕ ಮಾಲಕರ ಸಂಘದ ಅಧ್ಯಕ್ಷ ಧನ್ಯಕುಮಾರ್ ಬೆಳಂದೂರು ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆಂಪು ಕಲ್ಲು ಪ್ರಥಮ ದರ್ಜೆ ಹಾಗೂ ದ್ವಿತೀಯ ದರ್ಜೆ ದರ ಈ ರೀತಿ ಇದೆ..:
- ಪುತ್ತೂರು ಸಿಟಿ ಯಿಂದ 6 ಕಿಲೋಮೀಟರ್ ವ್ಯಾಪ್ತಿಯ ಒಳಗಡೆ ಪ್ರಥಮ ದರ್ಜೆಯ ಕೆಂಪು ಕಲ್ಲಿನ ದರ-35 ರೂ, ದ್ವಿತೀಯ ದರ್ಜೆಯ ಕೆಂಪು ಕಲ್ಲಿಗೆ- 29ರೂ.
- ಉಪ್ಪಿನಂಗಡಿಯಿಂದ 5ಕಿಲೋ ಮೀಟರ್ ವ್ಯಾಪ್ತಿಯೊಳಗಡೆ ಪ್ರಥಮ ಕೆಂಪು ಕಲ್ಲಿನ ದರ-37ರೂ, ದ್ವಿತೀಯ ದರ್ಜೆಯ ಕೆಂಪು ಕಲ್ಲಿನ ದರ-31ರೂ.
- ನೆಲ್ಯಾಡಿಯಿಂದ 3 ಕಿಲೋಮೀಟರ್ ವ್ಯಾಪ್ತಿಯೋಳಗಡೆ ಪ್ರಥಮ ದರ್ಜೆಯ ಕೆಂಪು ಕಲ್ಲಿನ ದರ – 40ರೂ, ದ್ವಿತೀಯ ದರ್ಜೆಯ ಕೆಂಪು ಕಲ್ಲಿನ ದರ-34ರೂ.
- ಕೊಕ್ಕಡದಿಂದ 5ಕಿಲೋ ಮೀಟರ್ ವ್ಯಾಪ್ತಿಯೊಳಗಡೆ ಪ್ರಥಮ ದರ್ಜೆಯ ಕೆಂಪು ಕಲ್ಲಿನ ದರ-42ರೂ, ದ್ವಿತೀಯ ದರ್ಜೆಯ ಕೆಂಪು ಕಲ್ಲಿನ ದರ-36ರೂ.
- ಗುಂಡ್ಯಾ, ಶಿರಾಡಿ, ಅಡ್ಡಹೊಳೆ ವ್ಯಾಪ್ತಿಗೆ ಕೆಂಪು ಕಲ್ಲಿನ ದರ-44ರೂ, ದ್ವಿತೀಯ ದರ್ಜೆಯ ಕೆಂಪು ಕಲ್ಲಿನ ದರ-38ರೂ.
- ಪುರುಷರುಕಟ್ಟೆಯಿಂದ 3 ಕಿಲೋಮೀಟರ್ ವ್ಯಾಪ್ತಿಯೋಳಗಡೆ ಪ್ರಥಮ ದರ್ಜೆಯ ಕೆಂಪು ಕಲ್ಲಿನ ದರ-35ರೂ, ದ್ವಿತೀಯ ದರ್ಜೆಯ ಕೆಂಪು ಕಲ್ಲಿನ ದರ-27ರೂ.
- ಸವಣೂರು, ವೀರಮಂಗಿಲ ವ್ಯಾಪ್ತಿಯಲ್ಲಿ ಕೆಂಪು ಕಲ್ಲಿನ ದರ-36ರೂ, ದ್ವಿತೀಯ ದರ್ಜೆಯ ಕೆಂಪು ಕಲ್ಲಿನ ದರ-28ರೂ.
- ಕುದ್ಮಾರು, ವ್ಯಾಪ್ತಿಯಿಂದ 3 ಕಿಲೋಮೀಟರ್ ವ್ಯಾಪ್ತಿಯೋಳಗಡೆ ಪ್ರಥಮ ದರ್ಜೆಯ ಕೆಂಪು ಕಲ್ಲಿನ ದರ-37ರೂ, ದ್ವಿತೀಯ ದರ್ಜೆಯ ಕೆಂಪು ಕಲ್ಲಿನ ದರ-29ರೂ.
- ಕಾಣಿಯೂರುನಿಂದ 5ಕಿಲೋ ಮೀಟರ್ ವ್ಯಾಪ್ತಿಯೊಳಗಡೆ ಪ್ರಥಮ ದರ್ಜೆಯ ಕೆಂಪು ಕಲ್ಲಿನ ದರ-38ರೂ, ದ್ವಿತೀಯ ದರ್ಜೆಯ ಕೆಂಪು ಕಲ್ಲಿನ ದರ-31ರೂ.
- ನಿಂತಿಕಲ್, ಅಲೆಕ್ಕಾಡಿ, ಎಣ್ಮೂರು, ಎಡಮಂಗಿಲ ವ್ಯಾಪ್ತಿಯಲ್ಲಿ ಕೆಂಪು ಕಲ್ಲಿನ ದರ-39ರೂ, ದ್ವಿತೀಯ ದರ್ಜೆಯ ಕೆಂಪು ಕಲ್ಲಿನ ದರ-32ರೂ.
- ಬೆಳ್ಳಾರೆ, ಅಂಕತಡ್ಕ, ಅವೆರ್ನಾಡು, ಪೆರುವಾಜೆ, ಯಿಂದ 3ಕಿಲೋ ಮೀಟರ್ ವ್ಯಾಪ್ತಿಯೊಳಗಡೆ ಪ್ರಥಮ ದರ್ಜೆಯ ಕೆಂಪು ಕಲ್ಲಿನ ದರ-37ರೂ, ದ್ವಿತೀಯ ದರ್ಜೆಯ ಕೆಂಪು ಕಲ್ಲಿನ ದರ-31ರೂ.
- ತಿಂಗಳಾಡಿ, ಸರ್ವೆ, ಮಾಡವು, ಕೆಯ್ಯೂರು, ಮುಂಡೂರು, ಪಂಜಳ,2ಕಿಲೋ ಮೀಟರ್ ವ್ಯಾಪ್ತಿಯೊಳಗಡೆ ಪ್ರಥಮ ದರ್ಜೆಯ ಕೆಂಪು ಕಲ್ಲಿನ ದರ-34ರೂ, ದ್ವಿತೀಯ ದರ್ಜೆಯ ಕೆಂಪು ಕಲ್ಲಿನ ದರ-26ರೂ.
- ಕುಂಬ್ರ, ಪರ್ಪುಂಜ, ಸಂಟ್ಯಾರು, ರೆಂಜ, ಬೆಟ್ಟಂಪಾಡಿ, ಕೈಕಾರ, ವ್ಯಾಪ್ತಿಯಿಂದ 3 ಕಿಲೋಮೀಟರ್ ವ್ಯಾಪ್ತಿಯೋಳಗಡೆ ಪ್ರಥಮ ದರ್ಜೆಯ ಕೆಂಪು ಕಲ್ಲಿನ ದರ- 34ರೂ, ದ್ವಿತೀಯ ದರ್ಜೆಯ ಕೆಂಪು ಕಲ್ಲಿನ ದರ-24ರೂ.
- ಕರಾಯ, ಇಳಂತಿಲ, ಕಲ್ಲೇರಿ, ಕುಪ್ಪೆಟ್ಟಿ, ಅಲೆಕ್ಕೆ, ತುರ್ಕಳಿಕೆ, ಸರಳಿಕಟ್ಟೆ ವ್ಯಾಪ್ತಿಯಿಂದ 2 ಕಿಲೋಮೀಟರಿನ ಒಳಗಡೆ ಕೆಂಪು ಕಲ್ಲಿನ ದರ-39ರೂ, ದ್ವಿತೀಯ ದರ್ಜೆಯ ಕೆಂಪು ಕಲ್ಲಿನ ದರ-32ರೂ.
ವಿ.ಸೂ:- ಕೆಂಪು ಕಲ್ಲಿನ ವಿಚಾರವಾಗಿ ಕೆಲವೊಂದು ಮಧ್ಯವರ್ತಿಗಳು (ಕೆಂಪು ಕಲ್ಲು ಏಜೆಂಟ್) ಇದ್ದಾರೆ ಆದ್ದರಿಂದ ದಯವಿಟ್ಟು ಎಲ್ಲಾ ಗ್ರಾಹಕರು ಏಜೆಂಟುಗಳಿಂದ ಮೋಸ ಹೋಗದೆ ನೇರವಾಗಿ ಕೆಂಪು ಕಲ್ಲಿನ ಲಾರಿಯವರನ್ನೇ ಸಂಪರ್ಕಿಸ ಬೇಕಾಗಿ ಜೈ ಭಾರತ್ ಲಾರಿ ಚಾಲಕ ಮಾಲಕರ ಸಂಘದ ಅಧ್ಯಕ್ಷ ಧನ್ಯಕುಮಾರ್ ಬೆಳಂದೂರು ತಿಳಿಸಿದ್ದಾರೆ.