ಕಡಬ ತಾಲೂಕಿನ ಕೊಣಾಲು ಗ್ರಾಮದಲ್ಲಿರುವ ಕೊಣಾಲು ದೇವತೆ ಕ್ಷೇತ್ರದಲ್ಲಿ ಜಾತಿ ಹೆಸರಿನಲ್ಲಿ ಸಾಮಾಜಿಕ ತಾರತಮ್ಯ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪುತ್ತೂರು ತಾಲೂಕು ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಬಿಲ್ಲವ ಸಂಘ ಮತ್ತು ಯುವವಾಹಿನಿ ಕೇಂದ್ರ ಸಮಿತಿಯ ನಿಯೋಗ ಜನವರಿ 6ರಂದು ದೈವಸ್ಥಾನಕ್ಕೆ ಭೇಟಿ ನೀಡಿತು.ದೈವಸ್ಥಾನದಲ್ಲಿ 6ರಂದು ಉತ್ಸವಾದಿಗಳು ನಡೆದಿದ್ದು, ಕ್ಷೇತ್ರದ ತಂತ್ರಿವರ್ಯರಾದ ಕೆಮ್ಮಿಂಜೆ ನಾಗೇಶ್ ತಂತ್ರಿಯವರಿಗೆ ಮಾಹಿತಿ ನೀಡಿದ್ದ ಬಿಲ್ಲವ ಸಂಘದ ನಿಯೋಗ ಬುಧವಾರ ಕ್ಷೇತ್ರಕ್ಕೆ ತೆರಳಿ ತಂತ್ರಿಗಳ ಸಮ್ಮುಖದಲ್ಲಿ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷರಾದ ಸತೀಶ್ ರೈ ಅವರಲ್ಲಿ ಸಾಮಾಜಿಕ ತಾರತಮ್ಯದ ಬಗ್ಗೆ ವಿವರಣೆ ಕೇಳಿದರು.
ಕೆಲವೊಂದು ನಿದರ್ಿಷ್ಟ ಜಾತಿ ಸಮುದಾಯಗಳನ್ನು ಕ್ಷೇತ್ರದ ಧಾಮರ್ಿಕ ವಿಧಿಗಳಿಂದ ದೂರವಿಟ್ಟಿರುವ ಬಗ್ಗೆ ಮತ್ತು ಈ ಸಮುದಾಯಗಳ ಸ್ಥಳೀಯ ಭಕ್ತರಿಗೆ ಪ್ರಸಾದ ನೀಡದಿರುವ ಬಗ್ಗೆ ಮಾಹಿತಿ ತಿಳಿಯಬಯಸಿತು. ಕೊರೊನಾ ಲಾಕ್ಡೌನ್ ಪೂರ್ವದಲ್ಲಿ ಇದೇ ಕ್ಷೇತ್ರದಲ್ಲಿ ಇಂಥದೇ ತಾರತಮ್ಯ ನಡೆದ ಘಟನೆ ಬೆಳಕಿಗೆ ಬಂದಾಗ ಸಮುದಾಯದ ನಾಯಕರು ಭೇಟಿ ನೀಡಿ, ಸಾಮಾಜಿಕ ತಾರತಮ್ಯ ಮಾಡದಂತೆ ತಿಳಿಸಿದ್ದರು.ತಾರತಮ್ಯ ಮಾಡದಿರಿ…ಜನವರಿ 6ರಂದು ಕ್ಷೇತ್ರಕ್ಕೆ ಭೇಟಿ ನೀಡಿದ ಬಗ್ಗೆ ಮಾಹಿತಿ ನೀಡಿದ ಪುತ್ತೂರು ತಾಲೂಕು ಬಿಲ್ಲವ ಸಂಘದ ಕಾರ್ಯದಶರ್ಿ ಶಶಿಧರ್ ಕಿನ್ನಿಮಜಲ್, ಕೊಣಾಲು ದೇವತೆ ಕ್ಷೇತ್ರ ವ್ಯಾಪ್ತಿಯ ಸುಮಾರು 20 ಕುಟುಂಬಗಳನ್ನು ಕ್ಷೇತ್ರದಿಂದ ದೂರ ಇರಿಸಲಾಗಿದೆ. ಅವರು ಕ್ಷೇತ್ರದ ಉತ್ಸವಕ್ಕೆ ಭಕ್ತಿಪೂರ್ವಕ ವಂತಿಗೆ ನೀಡಲು ಮುಂದೆ ಬಂದರೂ ಸ್ವೀಕರಿಸಿಲ್ಲ. ಹೊರೆಕಾಣಿಕೆ ತಂದೊಪ್ಪಿಸಿದರೂ ಇತರರಿಗೆ ನೀಡಿದಂತೆ ರಶೀದಿ ನೀಡಿಲ್ಲ. ಪೂಜಾ ಸಂದರ್ಭ ಆರತಿ ಪಡೆಯಲು ಬಂದರೂ ಆರತಿ ನೀಡದೆ ತಾರತಮ್ಯ ಮಾಡಲಾಗಿದೆ. ಈ ಬಗ್ಗೆ ಅಧ್ಯಕ್ಷರಲ್ಲಿ ಕಾರಣ ಕೇಳಿದರೆ, ಹಿಂದಿನ ಕಾಲದ ಸಂಪ್ರದಾಯ ನಾವು ಪಾಲಿಸುತ್ತಿದ್ದೇವೆ ಎಂಬ ಉತ್ತರ ನೀಡುತ್ತಿದ್ದಾರೆ. ಭಕ್ತರನ್ನು ಜಾತಿಯ ಹೆಸರಿನಲ್ಲಿ ದೂರ ಇರಿಸುವುದು ಸಂವಿಧಾನದತ್ತ ಕಾನೂನಿನ ಪ್ರಕಾರ ಅಕ್ಷಮ್ಯ ಅಪರಾಧ. ಹೀಗಿದ್ದರೂ ಅಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಈ ಬಗ್ಗೆ ನಾವು ತಂತ್ರಿಗಳ ಸಮ್ಮುಖದಲ್ಲೇ ಮನವಿ ಮಾಡಿ, ಸಮಸ್ಯೆ ಬಗೆಹರಿಸುವಂತೆ ತಿಳಿಸಿದ್ದೇವೆ. ನಿಯೋಗದಲ್ಲಿ ಹೋದ ನಮಗೆ ತಂತ್ರಿಗಳ ಮುಖೇನ ಪ್ರಸಾದ ನೀಡಲಾಗಿದ್ದರೂ, ಸ್ಥಳೀಯ ಕುಟುಂಬಗಳ ಕಡೆಗಿನ ತಾರತಮ್ಯ ನಿಂತಿಲ್ಲ ಎಂದರು.ನಿಯೋಗದಲ್ಲಿ ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲ್, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಡಾ. ರಾಜಾರಾಂ, ಉಪ್ಪಿನಂಗಡಿ ಯುವವಾಹಿನಿ ಘಟಕದ ಅಧ್ಯಕ್ಷ ಚಂದ್ರಶೇಖರ್, ಮಾಜಿ ಜಿಪಂ ಸದಸ್ಯ ಬಾಲಕೃಷ್ಣ ಬಾಣಜಾಲ್, ಪ್ರಮುಖರಾದ ಸದಾನಂದ ಕುಂದರ್, ಅಜಿತ್ ಪಾಲೇರಿ, ಸ್ಥಳೀಯ ಮುಖಂಡರಾದ ನೋಣಯ್ಯ ಪೂಜಾರಿ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.