Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಆನ್‌ಲೈನ್ ಮ್ಯಾಟ್ರಿಮೋನಿ ಮೂಲಕ ಮಹಿಳೆಯರಿಗೆ ವಂಚನೆ : ಆರೋಪಿ ಅರೆಸ್ಟ್..!!

    ಆನ್‌ಲೈನ್ ಮ್ಯಾಟ್ರಿಮೋನಿ ಮೂಲಕ ಮಹಿಳೆಯರಿಗೆ ವಂಚನೆ : ಆರೋಪಿ ಅರೆಸ್ಟ್..!!

    ಮಂಗಳೂರು: ಮತ್ತೊಂದು ಲವ್ ಜಿಹಾದ್ ಪ್ರಕರಣ ಬಯಲಿಗೆ, ಅನ್ಯಕೋಮಿನ ಯುವಕನೊಂದಿಗೆ ಹಿಂದೂ ಯುವತಿ ಪರಾರಿ..!!!

    ಮಂಗಳೂರು: ಮತ್ತೊಂದು ಲವ್ ಜಿಹಾದ್ ಪ್ರಕರಣ ಬಯಲಿಗೆ, ಅನ್ಯಕೋಮಿನ ಯುವಕನೊಂದಿಗೆ ಹಿಂದೂ ಯುವತಿ ಪರಾರಿ..!!!

    ಪುತ್ತೂರು: ಚೆನ್ನರಾಯಪಟ್ಟಣ ಬಳಿ ರೈಲಿನಿಂದ ಬಿದ್ದು ಯುವಕ ಮೃತ್ಯು..!!!

    ಪುತ್ತೂರು: ಚೆನ್ನರಾಯಪಟ್ಟಣ ಬಳಿ ರೈಲಿನಿಂದ ಬಿದ್ದು ಯುವಕ ಮೃತ್ಯು..!!!

    ವಿಟ್ಲದಲ್ಲಿ ಇನ್ನೂ ಉದ್ಘಾಟನೆಯಾಗದ ಇಂದಿರಾ ಕ್ಯಾಂಟೀನ್‌: ಬಡವರ ನಿರೀಕ್ಷೆ ನಿರಾಶೆಯಲ್ಲೇ..!!!

    ವಿಟ್ಲದಲ್ಲಿ ಇನ್ನೂ ಉದ್ಘಾಟನೆಯಾಗದ ಇಂದಿರಾ ಕ್ಯಾಂಟೀನ್‌: ಬಡವರ ನಿರೀಕ್ಷೆ ನಿರಾಶೆಯಲ್ಲೇ..!!!

    ವಿಟ್ಲ: ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಮೃತ್ಯು..!!

    ವಿಟ್ಲ: ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಮೃತ್ಯು..!!

    ಕುಂದಾಪುರ : ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ..!!

    ಕುಂದಾಪುರ : ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಪುತ್ತೂರು

ಪುತ್ತೂರು: ನಗರಸಭೆಯಲ್ಲಿ ಪೌರ ಕಾರ್ಮಿಕರ ದಿನಾಚರಣೆ:; ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ

September 23, 2021
in ಪುತ್ತೂರು
0
ಪುತ್ತೂರು: ನಗರಸಭೆಯಲ್ಲಿ ಪೌರ ಕಾರ್ಮಿಕರ ದಿನಾಚರಣೆ:; ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಪುತ್ತೂರು: ನಗರಸಭೆಯಲ್ಲಿ ಸೆ.23 ರಂದು ಪೌರ ಕಾರ್ಮಿಕರ ದಿನಾಚರಣೆ ಆಚರಿಸಲಾಯಿತು. ಬೆಳಿಗ್ಗೆ ಸಭಾ ಕಾರ್ಯಕ್ರಮ, ಸರಕಾರದ ಸಹಾಯಧನ ವಿತರಣೆ ಬಳಿಕ ಪೌರ ಕಾರ್ಮಿಕರಿಗೆ ಒಳಾಂಗ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Advertisement
Advertisement
Advertisement

ದೇಶದ ಜನರು ಬೆಚ್ಚನೆ ಮಲಗಿರುವ ಹೊತ್ತಿನಲ್ಲಿ ತಾವೆದ್ದು ಜಗದ ಕಸವನ್ನು ಹೆಕ್ಕುವ ಪೌರಕಾರ್ಮಿಕರು ಜನರು ಕಣ್ಣುಬಿಡುವ ಮುನ್ನ ತಮ್ಮ ಕೆಲಸ ಮುಗಿಸುವ ತರಾತುರಿಯಲ್ಲಿರುತ್ತಾರೆ. ಆದರೆ ಇಂದಿಗೂ ಪೌರ ಕಾರ್ಮಿಕರಿಗೆ ಬೇಡಿಕೆಯಾಗಿರುವ ನೇರ ನೇಮಕತಾತಿ, ವಸತಿ ಸೌಕರ್ಯ ಸಿಕ್ಕಿಲ್ಲ ಎಂಬ ಕೊರಗು ಪೌರ ಕಾರ್ಮಿಕರಲ್ಲಿದೆ. ಕೋವಿಡ್ ಸಂದರ್ಭದಲ್ಲೂ ನಿತ್ಯ ಎದೆಗುಂದದೆ ತಮ್ಮ ಕಾಯಕ ಮಾಡುತ್ತಿದ್ದ ಪೌರ ಕಾರ್ಮಿಕರ ಪರಿಸ್ಥಿತಿಯ ಮಧ್ಯೆಯೂ ಪೌರ ಕಾರ್ಮಿಕರ ದಿನಾಚರಣೆ ಬಂದಿದೆ.

ಪೌರ ಕಾರ್ಮಿಕರು ಮೊಂಬತ್ತಿಯ ಹಾಗೆ :
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಸವಣೂರುವಿದ್ಯಾರಶ್ಮಿ ಪದವಿ ಕಾಲೇಜಿನ ಪ್ರಾಂಶುಪಾಲ ಸೀತಾರಾಮ ಕೇವಳ ಅವರು ಮಾತನಾಡಿ ಪೌರಕಾರ್ಮಿಕರು ಮೊಂಬತ್ತಿಯ ಹಾಗೆ ಕೆಲಸ ಮಾಡುತ್ತಾರೆ. ಮೊಂಬತ್ತಿ ತಾನು ಉರಿದು ಜಗತ್ತಿಗೆ ಬೆಳಕು ಕೊಡುತ್ತದೆ. ಅದೇ ರೀತಿ ಪೌರ ಕಾರ್ಮಿಕರು ಕೆಲಸಕ್ಕೆ ನಮ್ಮಲ್ಲಿ ಪದಗಳೇ ಹೊರಬರುತ್ತಿಲ್ಲ. ಪೌರಕಾರ್ಮಿಕರ ಎಡಬಿಡದ ಶ್ರಮ ಇಲ್ಲದಿದ್ದರೆ. ನಾವು, ನೀವು ಸ್ವಚ್ಚ ಉಸಿರಾಟ ಮಾಡಲು ಸಾಧ್ಯವಿಲ್ಲ ಎಂದ ಅವರು ಪೌರ ಕಾರ್ಮಿಕರ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಲ್ಲ ಯಾಕೆಂದರೆ ವರ್ಷದ 365 ದಿನವೂ ಪೌರ ಕಾರ್ಮಿಕರನ್ನು ನೆನೆಸಬೇಕಾಗುವಂತಹ ಅದ್ಬುತವಾದ ಸೇವೆ ಪೌರ ಕಾರ್ಮಿಕರು ನೀಡುತ್ತಾರೆ ಎಂದ ಅವರು ಪೌರಕಾರ್ಮಿಕರ ಕರ್ತವ್ಯದ ಜೊತೆಗೆ ನಾಗರಿಕರು ಕೂಡಾ ಕೈ ಜೋಡಿಸಿದಾಗ, ನಗರಸಭೆ ನಿರ್ವಹಣೆ ಮಾಡಲು ಸಾಧ್ಯ. ನಾಗರಿಕ ಪ್ರಜ್ಞೆ ಹೊಂದಿದ್ದರೆ ನಗರಸಭೆ ಸ್ವಚ್ಚತೆಗೆ ಸಾಧ್ಯ ಎಂದರು.

Advertisement
Advertisement

ಆರೋಗ್ಯದ ಕಾಳಜಿಯೊಂದಿಗೆ ಆರ್ಥಿಕ ಉಳಿತಾಯ ಮಾಡಿ:
ಪೌರ ಕಾರ್ಮಿಕರು ಮಾಡುವ ಕೆಲಸದಲ್ಲಿ ನಿಯಂತ್ರಣಕ್ಕಾಗಿ ಕೆಲವೊಂದು ಆರೋಗ್ಯಕ್ಕೆ ಹಾನಿಕಾರಕ ಪದಾರ್ಥ ಸೇವಿಸುವುದು ಸಹಜ. ಆದರೆ ಅದು ಒಂದು ಕ್ಷಣದ ಸುಖ ಕೊಡುತ್ತದೆ ಹೊರತು ಜೀವನ ಪರ್ಯಂತ ಸುಖ ಸಿಗುವುದಿಲ್ಲ. ಇದರಿಂದ ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಗುಡುಕ ತಿನ್ನುವ ಪ್ರಕರಣ ನಿಲ್ಲಿಸಿದಾಗ ಆರೋಗ್ಯ ವೃದ್ದಿಸುತ್ತದೆ. ಇದು ನೀವು ನಿಮ್ಮ ಕುಟುಂಬಕ್ಕೆ ಕೊಡುವ ದೊಡ್ಡ ವಿಮೆ. ಇದರ ಜೊತೆಗೆ ನಿಮ್ಮ ಆರ್ಥಿಕ ಉಳಿತಾಯ ವೃದ್ಧಿಸುತ್ತದೆ ಎಂದ ಸೀತಾರಾಮ ಕೇವಳ ಅವರು ಗುಡ್ಕ, ಸಿಗರೇಟ್, ಮದ್ಯಕ್ಕೆ ಬೆಲೆ ಏರಿಕೆ ಆದಾಗ ಯಾರೂ ಪ್ರತಿಭಟನೆ ಮಾಡಿಲ್ಲ. ಕೇವಲ ತೈಲ ಬೆಲೆ, ಅನಿಲಕ್ಕೆ ಏರಿಕೆ ಆದಾಗ ಪ್ರತಿಭಟನೆ ಕಂಡಿದ್ದೇವೆ ಎಂದರು.

ಬಯೋ ಗ್ಯಾಸ್‌ಪ್ಲಾಂಟ್‌ನಿಂದ ತ್ಯಾಜ್ಯ ವಿಲೇವಾರಿ:
ನಗರಸಭೆ ಹಸಿ ತ್ಯಾಜ್ಯವನ್ನು ಆದಷ್ಟು ಮನೆ ಮನೆಯಲ್ಲೇ ವಿಲೇವಾರಿ ಮಾಡುವಂತೆ ಪ್ರೋತ್ಸಾಹಿಸಬೇಕು. ಇದಕ್ಕಾಗಿ ಪ್ರತಿ ಮನೆಯಲ್ಲೂ ಬಯೋ ಗ್ಯಾಸ್ ಪ್ಲಾಂಟ್ ಅಳವಡಿಸಬೇಕು. ಇದಕ್ಕೆ ನಗರಸಭೆ ಉತ್ತೇಜನ ನೀಡಬೇಕು. ಇಂತಹ ಕ್ರಾಂತಿಕಾರಿ ವ್ಯವಸ್ಥೆಗೆ ನಗರಸಭೆ ಮುಂದಾದಾಗ ನಗರಸಭೆ ಸ್ವಚ್ಛ ಸುಂದರ ಆಗುತ್ತದೆ ಎಂದು ಸೀತಾರಾಮ ಕೇವಳ ಹೇಳಿದರು.

ಪೌರ ಕಾರ್ಮಿಕರು ನಗರಸಭೆಯ ಬೆನ್ನೆಲುಬು:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಮಾತನಾಡಿ ಪೌರ ಕಾರ್ಮಿಕರ ಕಾಯಕ್ಕೆ ತಕ್ಕಂತೆ ಅವರು ನಗರಸಭೆಯ ಬೆನ್ನೆಲು ಆಗಿದ್ದಾರೆ. ಬೆಳಿಗ್ಗೆ ಗಂಟೆ ೫.೩೦ಕ್ಕೆ ಪ್ರಾರಂಭವಾದ ಅವರ ಕೆಲಸ ಮಧ್ಯಾಹ್ನದ ತನಕ ನಿರಂತರ ಕೆಲಸ ನಡೆಯುತ್ತದೆ. ನಮ್ಮ ಆಡಳಿತ ಬಂದ ಬಳಿಕ ಪೌರ ಕಾರ್ಮಿಕರ ಮೇಲೆ ಹೆಚ್ಚು ಮುತುವರ್ಜಿ ವಹಿಸಿ ಪೌರ ಕಾರ್ಮಿಕರಿಗೆ ಸಮವಸ್ತ್ರ, ಬ್ಯಾಡ್ಜ್ ವಿತರಣೆ, ಅವರ ನೇರ ಪಾವತಿಯ ಬಗ್ಗೆ ಸಚಿವರಿಗೆ ಮನವಿ ಕೊಡುವ ಕೆಲಸ ಮಾಡಿದ್ದೇವೆ. ಸರಕಾರದಿಂದ ರೂ. ೩,೫೦೦ ಸಹಾಯಧನದ ಬದಲು ರೂ. ೭ಸಾವಿರ ಕೊಡಲು ಸುತ್ತೋಲೆ ಬಂದಿದೆ. ಅದನ್ನು ನಗರಸಭೆ ನಿಧಿಯಿಂದ ಕೊಡಬೇಕಾಗಿರುವುದರಿಂದ ಕೌನ್ಸಿಲ್‌ನಲ್ಲಿ ಇಟ್ಟು ಬಳಿಕ ಕೊಡಲಾಗುವುದು. ಅದೇ ರೀತಿ ಬಲ್ನಾಡಿನಲ್ಲಿ ಪೌರ ಕಾರ್ಮಿಕರಿಗೆ ವಸತಿ ಮಾಡಲು ನಿಶ್ಚಯಿಸಲಾಗಿದೆ ಎಂದ ಅವರು ನಿಮ್ಮೊಂದಿಗೆ ನಾವಿದ್ದೇವೆ. ನಮ್ಮೊಂದಿಗೆ ನೀವಿದ್ದೀರಿ ಎಂಬ ನಂಬಿಕೆ ಇಟ್ಟು ಕೊಂಡಿದ್ದೇವೆ. ಮುಂದಿನ ದಿನ ಸ್ವಚ್ಛತೆಯಲ್ಲಿ ಪುತ್ತೂರು ನಗರಸಭೆ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆಯಬೇಕು ಎಂದರು.

ನೇರವೇತನ ಪೌರ ಕಾರ್ಮಿಕರಿಗೂ ಸರಕಾರದ ಸಹಾಯಧನ ಸಿಗಲಿ:
ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಅಣ್ಣಪ್ಪ ಕಾರೆಕ್ಕಾಡು ಅವರು ಮಾತನಾಡಿ, ಡಾ.ಬಿ.ಆರ್ ಅಂಬೇಡ್ಕರ್ ಅವರ ಹೋರಾಟದ ಫಲವಾಗಿ ಕಾರ್ಮಿಕರಿಗಾಗಿ 12 ಗಂಟೆ ಬದಲು 8 ಗಂಟೆ ಕೆಲಸದ ಅವಧಿ ಸಿಕ್ಕಿರುವುದನ್ನು ನಾವು ಮೊದಲಾಗಿ ನೆನಪಿಸಬೇಕು ಎಂದ ಅವರು ಕೊರೋನಾ ಸಂದರ್ಭದಲ್ಲಿ ಭಯದ ವಾತಾವರಣವಿದ್ದರೂ ಪೌರ ಕಾರ್ಮಿಕರು ರಜೆ ಮಾಡದೆ ಕರ್ತವ್ಯಕ್ಕೆ ಹಾಜರಾಗಿ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ನಗರಸಭೆ ಅಧ್ಯಕ್ಷರು, ಪೌರಾಯುಕ್ತರು, ಸದಸ್ಯರು ನಮ್ಮ ಸಮಸ್ಯೆಗಳಿಗೆ ಪೂರ್ಣ ಸಹಕಾರ ನೀಡಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಲು ನಗರಸಭೆ ಪೂರ್ಣ ಬೆಂಬಲ ಕೊಟ್ಟಿದ್ದಾರೆ. ನೇರ ವೇತನ, ನೇಮಕಾತಿ ನಮ್ಮ ಉದ್ದೇಶ. ಒಂದು ತಿಂಗಳೊಳಗೆ ಭರವಸೆ ಈಡೇರಿಸದಿದ್ದರೆ ಮುಂದೆ ಮತ್ತೆ ಪ್ರತಿಭಟನೆ ನಡೆಸಬೇಕಾಗುತ್ತದೆ. ಅದೇ ರೀತಿ ಜನರು ನಮ್ಮ ಮೇಲೆ ಇಟ್ಟಿರುವ ನಂಬಿಕೆಯಂತೆ ನಾವು ದಿನ ನಿತ್ಯದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಬೇಕು ಎಂದರಲ್ಲದೆ ಪೌರ ಕಾರ್ಮಿಕರ ದಿನಾಚರಣೆಯಂದು ಸರಕಾರ ನೀಡುವ ವಿಶೇಷ ಸಹಾಯಧನ ನೇರವೇತನ ಪೌರಕಾರ್ಮಿಕರಿಗೂ ನೀಡಬೇಕು ಮತ್ತು ಪೌರ ಕಾರ್ಮಿಕರ ದಿನಾಚರಣೆಗೆ ರೂ.೩ ಲಕ್ಷ ಅನುದಾನ ಇಡಬೇಕೆಂದರು.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಗೌರಿ ಬನ್ನೂರು, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ಅವರು ಮಾತನಾಡಿದರು. ಪೌರಾಯುಕ್ತ ಮಧು ಎಸ್ ಮನೋಹರ್ ಅವರು ಮಾತನಾಡಿ ಪೌರ ಕಾರ್ಮಿಕರ ದಿನಾಚರಣೆಯನ್ನು ಸರಕಾರ ವರ್ಷದಲ್ಲಿ ಎರಡು ದಿನ ಗುರುತು ಮಾಡಿತ್ತು. ರಾಜ್ಯಾದ್ಯಂತ ಸೆ.೨೩ಕ್ಕೆ ಪೌರ ಕಾರ್ಮಿಕರ ದಿನಾಚರಣೆ ಆಚರಣೆ ಮಾಡುತ್ತಿದ್ದು, ಈ ದಿನ ಎಲ್ಲಾ ಪೌರ ಕಾರ್ಮಿಕರಿಗೆ ರಜೆ ನೀಡಲಾಗಿದ್ದು, ಕೋವಿಡ್ ಮಾರ್ಗಸೂಚಿಯಂತೆ ಪೌರ ಕಾರ್ಮಿಕರಿಗೆ ಆಟೋಟ ಸ್ಪರ್ಧೆ ಏರ್ಪಡಿಸಲಾಗಿಲ್ಲ. ಹಾಗಾಗಿ ಅಕ್ಟೋಬರ್ ತಿಂಗಳಲ್ಲಿ ಆಟೋಟ ಸ್ಪರ್ಧೆ ಹಮ್ಮಿಕೊಳ್ಳಲಿದ್ದೇವೆ ಎಂದರು.

ಪೌರ ಕಾರ್ಮಿಕರಿಗೆ ವಿಶೇಷ ಗೌರವ ಧನ:
ಸರಕಾರದಿಂದ ಪೌರಕಾರ್ಮಿಕರಿಗೆ ನೀಡುವ ವಿಶೇಷ ಗೌರವ ಧನ ವನ್ನು 12 ಮಂದಿ ಖಾಯಂ ಪೌರ ಕಾರ್ಮಿಕರಿಗೆ ವಿತರಣೆ ಮಾಡಲಾಯಿತು. ನಗರಸಭೆ ಆರೋಗ್ಯ ನಿರೀಕ್ಷಕರಾದ ಶ್ವೇತಾ ಕಿರಣ್, ರಾಮಚಂದ್ರ, ರಾಧಾಕೃಷ್ಣ, ಸಿ.ಆರ್ ದೇವಾಡಿಗ ಅತಿಥಿಗಳನ್ನು ಗೌರವಿಸಿದರು. ವಾಣಿ ಪ್ರಾರ್ಥಿಸಿದರು. ರವಿ ಸ್ವಾಗತಿಸಿದರು. ಕಂದಾಯ ನಿರೀಕ್ಷಕ ರಾಧಾಕೃಷ್ಣ ಕಾರ್ಯಕ್ರಮ ನಿರೂಪಿಸಿದರು.ಚಾಲಕ ರಾಧಾಕೃಷ್ಣ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಪೌರ ಕಾರ್ಮಿಕರಿಗೆ ಒಳಾಂಗಣ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Advertisement
Previous Post

ಫೈನಾನ್ಸ್ ಗಳ ಹೆಸರಿನಲ್ಲಿ ಸಾಲ ಕೊಡಿಸುವುದಾಗಿ ಹೇಳಿ ವಂಚನೆ:; ಲಕ್ಷಾಂತರ ರೂ. ಹಣ ಕಳೆದುಕೊಂಡ ರಾಮಕುಂಜದ ವ್ಯಕ್ತಿ:; ಮೊಬೈಲ್ ಫೋನ್ ಗೆ ಬರುವ ಸಂದೇಶಕ್ಕೆ ಪ್ರತಿಕ್ರಿಯಿಸುವ ಮುನ್ನ ಎಚ್ಚರ

Next Post

ಉಪ್ಪಿನಂಗಡಿ: ನಾಪತ್ತೆಯಾಗಿದ್ದ ರಫೀಕ್ ಖಾನ್ ಪತ್ತೆ..!!! ಉಗ್ರ ಸಂಘಟನೆ ನಂಟಿನ ಬಗ್ಗೆ ಇದ್ದ ಊಹಾ ಪೋಹಗಳಿಗೆ ತೆರೆ….!!!

OtherNews

ಪುತ್ತೂರು: ಚೆನ್ನರಾಯಪಟ್ಟಣ ಬಳಿ ರೈಲಿನಿಂದ ಬಿದ್ದು ಯುವಕ ಮೃತ್ಯು..!!!
Featured

ಪುತ್ತೂರು: ಚೆನ್ನರಾಯಪಟ್ಟಣ ಬಳಿ ರೈಲಿನಿಂದ ಬಿದ್ದು ಯುವಕ ಮೃತ್ಯು..!!!

February 10, 2026
ವಿಟ್ಲದಲ್ಲಿ ಇನ್ನೂ ಉದ್ಘಾಟನೆಯಾಗದ ಇಂದಿರಾ ಕ್ಯಾಂಟೀನ್‌: ಬಡವರ ನಿರೀಕ್ಷೆ ನಿರಾಶೆಯಲ್ಲೇ..!!!
Featured

ವಿಟ್ಲದಲ್ಲಿ ಇನ್ನೂ ಉದ್ಘಾಟನೆಯಾಗದ ಇಂದಿರಾ ಕ್ಯಾಂಟೀನ್‌: ಬಡವರ ನಿರೀಕ್ಷೆ ನಿರಾಶೆಯಲ್ಲೇ..!!!

February 10, 2026
ವಿಟ್ಲ: ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಮೃತ್ಯು..!!
Featured

ವಿಟ್ಲ: ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಮೃತ್ಯು..!!

February 10, 2026
ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚನೆ ಪ್ರಕರಣ : ಆರೋಪಿಗೆ ಆಶ್ರಯ ನೀಡಿದ ತಂದೆಯ ಮೇಲಿನ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ..!!
Featured

ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚನೆ ಪ್ರಕರಣ : ಆರೋಪಿಗೆ ಆಶ್ರಯ ನೀಡಿದ ತಂದೆಯ ಮೇಲಿನ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ..!!

February 9, 2026
ಪುತ್ತೂರು ಗ್ರಾಮಾಂತರ ಪೊಲೀಸರ ಯಶಸ್ವಿ ಕಾರ್ಯಾಚರಣೆ : 1 ಕ್ವಿಂಟಾಲ್‌ಗೂ ಅಧಿಕ ಗಾಂಜಾ ವಶ: ಒರಿಸ್ಸಾ ಪೂರೈಕೆದಾರ ಸೇರಿ ಮೂವರು ಆರೋಪಿಗಳ ಬಂಧನ..!!
Featured

ಪುತ್ತೂರು ಗ್ರಾಮಾಂತರ ಪೊಲೀಸರ ಯಶಸ್ವಿ ಕಾರ್ಯಾಚರಣೆ : 1 ಕ್ವಿಂಟಾಲ್‌ಗೂ ಅಧಿಕ ಗಾಂಜಾ ವಶ: ಒರಿಸ್ಸಾ ಪೂರೈಕೆದಾರ ಸೇರಿ ಮೂವರು ಆರೋಪಿಗಳ ಬಂಧನ..!!

February 8, 2026
ವಿಟ್ಲ: ಅನಾರೋಗ್ಯದ ಹಿನ್ನಲೆ ವ್ಯಕ್ತಿ ಮೃತ್ಯು ..!!!
Featured

ವಿಟ್ಲ: ಅನಾರೋಗ್ಯದ ಹಿನ್ನಲೆ ವ್ಯಕ್ತಿ ಮೃತ್ಯು ..!!!

February 8, 2026

Leave a Reply Cancel reply

Your email address will not be published. Required fields are marked *

Recent News

ಆನ್‌ಲೈನ್ ಮ್ಯಾಟ್ರಿಮೋನಿ ಮೂಲಕ ಮಹಿಳೆಯರಿಗೆ ವಂಚನೆ : ಆರೋಪಿ ಅರೆಸ್ಟ್..!!

ಆನ್‌ಲೈನ್ ಮ್ಯಾಟ್ರಿಮೋನಿ ಮೂಲಕ ಮಹಿಳೆಯರಿಗೆ ವಂಚನೆ : ಆರೋಪಿ ಅರೆಸ್ಟ್..!!

February 10, 2026
ಮಂಗಳೂರು: ಮತ್ತೊಂದು ಲವ್ ಜಿಹಾದ್ ಪ್ರಕರಣ ಬಯಲಿಗೆ, ಅನ್ಯಕೋಮಿನ ಯುವಕನೊಂದಿಗೆ ಹಿಂದೂ ಯುವತಿ ಪರಾರಿ..!!!

ಮಂಗಳೂರು: ಮತ್ತೊಂದು ಲವ್ ಜಿಹಾದ್ ಪ್ರಕರಣ ಬಯಲಿಗೆ, ಅನ್ಯಕೋಮಿನ ಯುವಕನೊಂದಿಗೆ ಹಿಂದೂ ಯುವತಿ ಪರಾರಿ..!!!

February 10, 2026
ಪುತ್ತೂರು: ಚೆನ್ನರಾಯಪಟ್ಟಣ ಬಳಿ ರೈಲಿನಿಂದ ಬಿದ್ದು ಯುವಕ ಮೃತ್ಯು..!!!

ಪುತ್ತೂರು: ಚೆನ್ನರಾಯಪಟ್ಟಣ ಬಳಿ ರೈಲಿನಿಂದ ಬಿದ್ದು ಯುವಕ ಮೃತ್ಯು..!!!

February 10, 2026
ವೀರಕಂಬ ಗ್ರಾಮದಲ್ಲಿ ಅಗ್ನಿ ಅವಘಡ – ಮನೆ ಸಂಪೂರ್ಣ ಭಸ್ಮ..!!!

ವೀರಕಂಬ ಗ್ರಾಮದಲ್ಲಿ ಅಗ್ನಿ ಅವಘಡ – ಮನೆ ಸಂಪೂರ್ಣ ಭಸ್ಮ..!!!

February 10, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page