ಉಪ್ಪಿನಂಗಡಿ: ನೆಕ್ಕಿಲಾಡಿಯಲ್ಲಿ 2-3 ವರ್ಷ ನೆಲೆಸಿದ್ದ ರಫೀಕ್ ಖಾನ್ ಇದ್ದಕ್ಕಿದಂತೆ ನಾಪತ್ತೆಯಾಗಿದ್ದ ಬಗ್ಗೆ ಈತನ ಪತ್ನಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ ಘಟನೆ ಜು.17 ರಂದು ನಡೆದಿತ್ತು.
ಈತ ನಾಪತ್ತೆಯಾಗುತ್ತಿದ್ದಂತೆ ಕೆಲ ಊಹಾ ಪೋಹಾಗಳು ಹುಟ್ಟಿಕೊಂಡಿದ್ದು, ನಾಪತ್ತೆಯಾದ ರಫೀಕ್ ಗೆ ಉಗ್ರ ಸಂಘಟನೆಗಳ ನಂಟು ಇದೆ ಎಂದು ಸಾಕಷ್ಟು ಸುದ್ದಿ ಮಾಡಿತ್ತು.
ಆದರೇ ಅದಕ್ಕೆಲ್ಲಾ ಈಗ ತೆರೆ ಬಿದ್ದಿದ್ದು, ಸೆ.22 ರಂದು ರಫೀಕ್ ತನ್ನ ಹೆಂಡತಿಗೆ ವಿಡಿಯೋ ಕಾಲ್ ಮಾಡಿದ್ದು ಆ ಮೂಲಕ ಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಸುಮಾರು 2-3 ವರ್ಷಗಳಿಂದ ನೆಕ್ಕಿಲಾಡಿಯಲ್ಲಿ ರಫೀಕ್ ವಾಸವಾಗಿದ್ದ ಜು.12 ರಂದು ರಫಿಕ್ ಬೆಂಗಳೂರಿಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದು ಫೋನ್ ಕರೆಗೂ ಸಿಗದೇ ನಾಪತ್ತೆಯಾಗಿದ್ದ, ಈ ಬಗ್ಗೆ ಸ್ಥಳೀಯ ಸಾಮಾಜಿಕ ಜಾಲತಾಣಗಳಲ್ಲಿ ರಫಿಕ್ ಖಾನ್ ಉತ್ತರ ಪ್ರದೇಶದಲ್ಲಿ ಬಂಧಿತರಾದ ಉಗ್ರಗಾಮಿಗಳ ನಂಟು ಹೊಂದಿದ್ದ ಎಂದು ಹರಿದಾಡುತ್ತಿದ್ದು ಇದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ. ರಫೀಕ್ ಸೆ.22 ತನ್ನ ಹೆಂಡತಿ ಜೊತೆ ಫೋನ್ ನಲ್ಲಿ ವಿಡಿಯೋ ಕಾಲ್ ಮೂಲಕ ಮಾತಾನಾಡಿದ್ದು, ಈ ಪ್ರಕರಣವನ್ನು ಪತ್ತೆಯಾದ ಪ್ರಕರಣವೆಂದು ಪರಿಗಣಿಸಿ ಮುಕ್ತಾಯ ಮಾಡಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.