ಪುತ್ತೂರು: ಪುತ್ತೂರಿನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿ ರಾಜ್ಯವ್ಯಾಪಿ ಕಾರ್ಯಾಚರಿಸುತ್ತಿರುವ ರಾಜ್ಯದ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾಗಿರುವ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿಯ ಕಾರ್ಯಾನುಗುಣ ನಿರ್ದೇಶಕರುಗಳಾಗಿ ಕರ್ನಾಟಕ ರಾಜ್ಯ ಹೈಕೋರ್ಟ್ ವಕೀಲರಾಗಿರುವ ಬಂಟ್ವಾಳ ತಾಲೂಕು ಪುಣಚ ಗ್ರಾಮದ ರವೀಶ್ ಪಿ ಹಾಗೂ ಕೊಡಗು ಜಿಲ್ಲೆ ವಿರಾಜಪೇಟೆಯ ಖ್ಯಾತ ಛಾಯಾಚಿತ್ರಗಾರರು ಮತ್ತು ಪಕ್ಷಿತಜ್ಞರಾಗಿರುವ ಶ್ರೀಕಾಂತ್ ವಿ ಡಿ ಇವರು ಸಹಕಾರಿಯ ಆಡಳಿತ ಮಂಡಲಿಗೆ ಕಾರ್ಯಾನುಗುಣ ನಿರ್ದೇಶಕರಾಗಿ ಸೇರ್ಪಡೆಗೊಂಡಿದ್ದಾರೆ.

ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿಯು ಪ್ರಸ್ತುತ ರಾಜ್ಯಾದ್ಯಂತ 17 ಶಾಖೆಗಳು, ರೂ. 213 ಕೋಟಿ ಠೇವಣಿ ಹೊಂದಿದ್ದು, ರೂ. 167 ಕೋಟಿ ಸಾಲ ನೀಡಿದ್ದು, 35,೦೦೦ ಸದಸ್ಯರನ್ನು ಹೊಂದಿ ಸೇವೆಗಳನ್ನು ನೀಡುತ್ತಿದೆ.
