ಪುತ್ತೂರು: ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿ, ಪ್ರೊ.ಜಿ.ಟಿ.ಭಟ್ ಪುತ್ರ ರವರ ರೋಹಿತ್ ಕೆ.ಜಿ (46) ಸೆ.21 ರಂದು ಬೆಂಗಳೂರಿನಲ್ಲಿ ನಿಧನರಾದರು.
ಪುತ್ತೂರಿನ ಬಿ.ಎಂ. ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಪದವಿ ಶಿಕ್ಷಣವನ್ನು ವಿವೇಕಾನಂದ ಕಾಲೇಜಿನಲ್ಲಿ ಪಡೆದಿದ್ದ ಇವರು ನಂತರ ಎಂ.ಬಿ.ಎ ಶಿಕ್ಷಣ ಪೂರೈಸಿ ಹಲವಾರು ವರ್ಷಗಳ ಕಾಲ ದುಬೈಯಲ್ಲಿ ಉದ್ಯೋಗಿಯಾಗಿ ಇತ್ತೀಚೆಗಷ್ಟೇ ತಾಯ್ನಾಡಿಗೆ ಆಗಮಿಸಿದ್ದರು.
ದುಬೈ ಕನ್ನಡ ಸಂಘದಲ್ಲೂ ಸಕ್ರಿಯರಾಗಿ ಕೆಲಸ ಮಾಡಿದ್ದ ರೋಹಿತ್ ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿದ್ದರು.
ರೋಹಿತ್ ವಿವೇಕಾನಂದ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಅಂಕೋಲದ ಕೋನಾಳದವರಾದ ಪ್ರೊ.ಜಿ.ಟಿ.ಭಟ್ ಹಾಗೂ ಜಯಶ್ರೀ ಜಿ.ಟಿ ಭಟ್ ದಂಪತಿಗಳ ಪುತ್ರ.
ಮೃತರು ತಂದೆ, ತಾಯಿ, ಪತ್ನಿ ಚೇತನಾ, ಮಕ್ಕಳಾದ ಸಿದ್ದಾರ್ಥ ಮತ್ತು ಸಿರಿ ಹಾಗೂ ಅಪಾರ ಬಂಧುವರ್ಗದವರನ್ನು ಅಗಲಿದ್ದಾರೆ.