ಮಹಾರಾಷ್ಟ್ರ: 15 ವರ್ಷದ ಅಪ್ರಾಪ್ತೆ ಬಾಲಕಿ ಮೇಲೆ ಸತತ 8 ತಿಂಗಳಿಂದ ಅತ್ಯಾಚಾರ ನಡೆದ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಒಟ್ಟು 33 ಜನರಿಂದ ನಿರಂತರ ಅತ್ಯಾಚಾರ ನಡೆದಿದೆ ಎನ್ನಲಾಗಿದ್ದು ಬಾಲಕಿ ಕೊಟ್ಟಿರೋ ದೂರಿನ ಮೇಲೆ ಇಲ್ಲಿಯವರೆಗೆ 26 ಜನರ ಬಂಧಿಸಲಾಗಿದೆ. 26 ಜನರಲ್ಲಿ ಇಬ್ಬರು ಅಪ್ರಾಪ್ತ ವಯಸ್ಕರಾಗಿದ್ದಾರೆ ಎಂದು ಹೇಳಲಾಗಿದೆ.
ಕಳೆದ ಜನೇವರಿ ತಿಂಗಳಲ್ಲಿ ಅಪ್ರಾಪ್ತೆ ಬಾಲಕಿ ದುಷ್ಕರ್ಮಿಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದು, ನಂತರ ಸ್ನೇಹ ಸಲುಗೆಯತ್ತ ಸಾಗಿದೆ ಎನ್ನಲಾಗಿದೆ. ನಂತರ ಸಾಮಾಜಿಕ ಜಾಲತಾಣದಲ್ಲಿ ಕೆಲ ಖಾಸಗಿ ವಿಡಿಯೋ ಹಂಚಿಕೊಂಡಿದ್ದಾಳೆ ಎನ್ನಲಾಗಿದೆ. ಇದನ್ನೆ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಲು ಯತ್ನಿಸಿದ 33 ಜನ 8 ತಿಂಗಳಿಂದ ನಿರಂತರವಾಗಿ ವಿವಿಧ ಸ್ಥಳಗಳಲ್ಲಿ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಬಂಧಿತ ಆರೋಪಿಗಳ ಮೇಲೆ 376. 376N. 376D. 376(3) ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.