ಪುತ್ತೂರು: ಬ್ಲಾಕ್ ಕಾಂಗ್ರೆಸ್ ಮುಖಂಡರು ಬನ್ನೂರು ಗ್ರಾಮದಲ್ಲಿರುವ ಕಾಂಗ್ರೆಸ್ ಮುಖಂಡ ಹಾಗೂ ಬನ್ನೂರು ಸಹಕಾರಿ ಸಂಘದ ಉಪಾಧ್ಯಕ್ಷರು, ಪುತ್ತೂರು ಪಿಎಲ್ ಡಿ ಬ್ಯಾಂಕಿನ ನಿರ್ದೇಶಕರಾದ ರಾಜ ಶೇಖರ್ ಜೈನ್, ಮಾಜಿ ಪುರಸಭಾ ಸದಸ್ಯರಾದ ದೇವದಾಸ ಶೆಟ್ಟಿ ಹಾಗೂ ಸರೋಜಾ ಡಿ ಶೆಟ್ಟಿ, ಮೋಹನ್ ರೈ ಬನ್ನೂರು , ಕಿರಣ್ ಡಿ ಸೋಜಾ, ಸತ್ತು ಪೋರ್ಬುಲು, ರಾಘವೇಂದ್ರ, ಚಂದ್ರ ಪಾಟಾಳಿ ಮೊದಲಾದವರನ್ನು ಅವರ ಮನೆಯಲ್ಲಿ ಭೇಟಿ ಮಾಡಿ ಕಾಂಗ್ರೆಸ್ ಪಕ್ಷದ ಸಂಘಟನೆ ಬಗ್ಗೆ ಸಮಾಲೋಚನೆ ನಡೆಸಿ, ಬನ್ನೂರು ಗ್ರಾಮದಲ್ಲಿ ಪಕ್ಷವನ್ನು ಬಲಪಡಿಸುವ ಬಗ್ಗೆ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ,ನಗರ ಕಾಂಗ್ರೆಸ್ ಅಧ್ಯಕ್ಷರಾದ ಎಚ್ ಮಹಮದ್ ಆಲಿ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಮೌರಿಸ್ ಮಸ್ಕರೇನಸ್, ಬ್ಲಾಕ್ ಕಾರ್ಮಿಕ ಘಟಕದ ಅಧ್ಯಕ್ಷರಾದ ಶರೋನ್ ಸಿಕ್ವೇರಾ, ಬ್ಲಾಕ್ ಕೋವಿಡ್ ಸೇವಕ್ ಸಿಮ್ರಾನ್ ನಜೀರ್ ಉಪಸ್ಥಿತರಿದ್ದರು.