ಪುತ್ತೂರು: ಸುಮಾರು ವರ್ಷಗಳಿಂದ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕೆಲಸ ಕಾರ್ಯದ ಮೂಲಕ ಹಾಗೂ ಕೋವಿಡ್ ಸಂದರ್ಭದಲ್ಲಿ ಸಹಾಯವಾಣಿಯ ಮೂಲಕ ಕೋವಿಡ್ ಬಗ್ಗೆ ಜನಜಾಗೃತಿ ಮೂಡಿಸುತ್ತ ಸೊಂಕಿತ ರೋಗಿಗಳ ಸೇವೆಗಳು ಮತ್ತು ಅಂತ್ಯ ಸಂಸ್ಕಾರ ಮಾಡಿ ಸಾರ್ವಜನಿಕರ ಪ್ರಸಂಸೆಗೆ ಪಾತ್ರವಾಗಿದ್ದ ಶ್ರೀರಾಮ ಗೆಳೆಯರ ಬಳಗಕ್ಕೆ ಪ್ರಗತಿಪರ ಕೃಷಿಕ ದಿ. ಈಶ್ವರ ಪೂಜಾರಿಯವರ ನೆನಪಿಗಾಗಿ ಆಶಕ್ತರಿಗೆ ಉಪಯೋಗವಾಗಬೇಕು ಎಂಬ ಕಾರಣಕ್ಕೆ ಸುಮಾರು 50000 ವೆಚ್ಚದಲ್ಲಿ ವಾಟರ್ ಬೆಡ್ ಮತ್ತು ವೀಲ್ ಚೇರ್ ನ್ನು ಅವರ ಮೊಮ್ಮಕ್ಕಳಾದ ಸನತ್ ಮತ್ತು ಪ್ರಖ್ಯಾತ್ ಅವರು ಗೆಳೆಯರ ಬಳಗದ ಅಧ್ಯಕ್ಷ ಹರೀಶ್ ಬಿಕೆ ಯವರಿಗೆ ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಈಶ್ವರ ಪೂಜಾರಿ ಯವರ ಪುತ್ರ ರಾಜೀವ ಸುವರ್ಣ ಪಂಚಾಯತ್ ಸದಸ್ಯರಾದ ಅಶೋಕ್ ಪುತ್ತಿಲ, ಬಾಲಕೃಷ್ಣ ಪೂಜಾರಿ ಮತ್ತು ಮೋನಪ್ಪ ಗುತ್ತಿನಪಾಲು,ಶ್ರೀಧರ ನಾಯ್ಕ್, ಧನಂಜಯ, ಪ್ರಸಾದ್ ಬಿಕೆ ಸೇರಿದಂತೆ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು.